ಭಾನುವಾರ, 25 ಅಕ್ಟೋಬರ್ 2026
Trending

ಮಂಗಳೂರು-ಬೆಂಗಳೂರು ರೈಲು ಸಂಚಾರ ಮರು ಆರಂಭ

ಮಂಗಳೂರು: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ರೈಲು ಮಾರ್ಗಕ್ಕೆ ಮಣ್ಣು ಕುಸಿತ ಉಂಟಾಗಿದ್ದು, ಇದೀಗ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸೋಮವಾರ ರಾತ್ರಿ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ.

Sponsored

ಘಟನಾ ಸ್ಥಳದಲ್ಲಿ ಸುರಕ್ಷಿತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಂಟೆಗೆ 10ಕಿ.ಮೀ. ತಾತ್ಕಾಲಿಕ ವೇಗದ ನಿರ್ಬಂಧ ಜಾರಿಯಲ್ಲಿದೆ. ವೇಳಾಪಟ್ಟಿಯನ್ನು ಹಂತಹಂತವಾಗಿ ಮರು ಹೊಂದಿಸಲಾಗುತ್ತದೆ. ಕೆಲ ವಿಳಂಬಗಳು ಮುಂದುವರಿದು ಬಳಿಕ ಎಂದಿನ ರೀತಿಯಲ್ಲಿಯೇ ರೈಲು ಸೇವೆ ಮುಂದುವರಿಯಲಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.