Home » ಮಂಗಳೂರು-ಬೆಂಗಳೂರು ‘ವಂದೇ ಭಾರತ್’ ಪ್ರಾಯೋಗಿಕ ಓಡಾಟ ಆರಂಭ!!

ಮಂಗಳೂರು-ಬೆಂಗಳೂರು ‘ವಂದೇ ಭಾರತ್’ ಪ್ರಾಯೋಗಿಕ ಓಡಾಟ ಆರಂಭ!!

0 comments

ಕರಾವಳಿ ಭಾಗದ ರೈಲು ಪ್ರಯಾಣಿಕರ ಸುದೀರ್ಘ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಬೆಂಗಳೂರು-ಮಂಗಳೂರು ಸಂಪರ್ಕಿಸುವ ಅತ್ಯಂತ ಸವಾಲಿನ ಘಾಟ್ ರಸ್ತೆಯಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರ ಆ 12ರಂದು ಆರಂಭವಾಗಿದೆ.

ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಇಂದಿನಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನೆಟ್ಟಣ ರೈಲು ನಿಲ್ದಾಣದ ಮಧ್ಯೆ ಈ ರೈಲು ಓಡಾಟವನ್ನು ಆರಂಭಿಸಿದ್ದು, ಪರಿಕ್ಷಾರ್ಥವಾಗಿ ಈ ಸಂಚಾರ ಆರಂಭಗೊಂಡಿದೆ. 

ಸುಬ್ರಹ್ಮಣ್ಯ ನೆಟ್ಟಣ ರೈಲು ನಿಲ್ದಾಣದಿಂದ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇಸರಿ ಬಣ್ಣದ ವಂದೇ ಭಾರತ್ ರೈಲು ತನ್ನ ಮೊದಲ ಪ್ರಯಾಣವನ್ನು ಘಾಟ್ ರಸ್ತೆಯ‌ ಮೂಲಕ ಆರಂಭಿಸಿದೆ. ಒಟ್ಟು 20 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರಯಾಣಿಕರ ಬದಲಿಗೆ ಬೋಗಿಯ ತುಂಬಾ ಮರಳು ಚೀಲಗಳನ್ನು ತುಂಬಿಸಿ, ನಿರ್ದಿಷ್ಟ ವೇಗಗಳಲ್ಲಿ ಹಲವು ಬಾರಿ ಘಾಟ್ ಹಳಿಗಳಲ್ಲಿ ಈ ರೈಲನ್ನು ಓಡಿಸಲಾಗುತ್ತದೆ. ಪ್ರತಿಬಾರಿಯ ಓಡಾಟದ ಸಂದರ್ಭದಲ್ಲೂ ರೈಲಿನ ವೇಗದ ಮಿತಿಯನ್ನು ಹೆಚ್ಚಿಸಿ‌ ಯಾವ ವೇಗದಲ್ಲಿ ರೈಲು ಓಡಲು ಅನುಕೂಲ ಎನ್ನುವ ಪರೀಕ್ಷೆಯನ್ನೂ ಈ ಓಡಾಟದ ಮೂಲಕ ನಡೆಸಲಾಗುತ್ತದೆ. 

You may also like