ಸೋಮವಾರ, 26 ಅಕ್ಟೋಬರ್ 2026
Trending

ಮಂಗಳೂರು: ದಸರಾ ರಜೆ ಸಮಯದಲ್ಲೇ ಪರೀಕ್ಷೆ, ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ

ಮಂಗಳೂರು: ದಸರಾ ಸಂಭ್ರಮದಲ್ಲಿಯೇ ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್‌ ಪರೀಕ್ಷೆಗಳನ್ನು ನಿಗದಿ ಮಾಡಿರುವುದನ್ನು ವಿರೋಧಿಸಿ, ಸೈಂಟ್‌ ಆಗ್ನೆಸ್‌ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟು ಎದುರು ಬೃಹತ್‌ ಪ್ರತಿಭಟನೆ ಮಾಡಿದ್ದಾರೆ.

Sponsored

ಮಂಗಳೂರಿನ ಬೆಂದೂರ್‌ವೆಲ್‌ ಬಳಿ ಇರುವ ಸೈಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್‌ 28 ರವರೆಗೆ ಪದವಿ ವಿದ್ಯಾರ್ಥಿಗಳಗೆ ಸೆಮಿಸ್ಟರ್‌ ಪರೀಕ್ಷೆಗಳನ್ನು ಇಡಲಾಗಿದೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ದಸರಾ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement

ಎಬಿವಿಪಿ ಈ ಪ್ರತಿಭಟನೆಗೆ ಸಾಥ್‌ ನೀಡಿದೆ. ಪರೀಕ್ಷೆ ಮುಂದೂಡಲು ಆಡಳಿತ ಮಂಡಳಿಗೆ ಮೊದಲೇ ಮನವಿ ಮಾಡಲಾಗಿತ್ತು. ಆದರೂ ಕಡೆಗಣಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ದಸರಾ ಹಬ್ಬದ ವೇಳೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದನ್ನು ಸರಿಪಡಿಸಲು ಹಾಗೂ ಪರೀಕ್ಷೆಯನ್ನು ಕೂಡಲೇ ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಳಿಗೆ ದೂರು ನೀಡಿದ್ದಾರೆ.

Advertisement