ಭಾನುವಾರ, 25 ಅಕ್ಟೋಬರ್ 2026
Trending

SHOCKING NEWS: ಮಾಂಸದೂಟದ ಕನಸು ಕಾಣುತ್ತಲೇ, ಮೇಕೆ ಅಂದುಕೊಂಡು ತನ್ನ ಮರ್ಮಾಂಗ ಕತ್ತರಿಸಿಕೊಂಡ ಭೂಪ..!

ನಿದ್ದೆ ಮಾಡಿದ ಬಳಿಕ ಸುಂದರ ಕನಸು ಕಾಣುವುದು ಸಹಜ. ಎಲ್ಲರಿಗೂ ಇದು ಮಾಮೂಲು. ಕೆಲವರು ಕನಸು ಕಾಣುತ್ತಲೇ ಸವಿನಿದ್ರೆಗೆ ಜಾರಿದ್ದರೇ, ಇನ್ನೂ ಕೆಲವರು ಕನಸು ಕಾಣುತ್ತಾ ನಿದ್ದೆ ಬಾರದೇ ಒದ್ದಾಡುವವರೂ ಇರುತ್ತಾರೆ. ಆದರೆ ಇಲ್ಲೊಬ್ಬ ಭೂಪ ನಿದ್ದೆಗೆ ಜಾರುತ್ತಾ ಸುಂದರ ಕನಸು ಕಾಣುತ್ತಾ ಏನು ಎಡವಟ್ಟು ಮಾಡಿದ್ದಾನೆಂದು ಹೇಳುತ್ತೇವೆ ಕೇಳಿ.

Sponsored

ಆತನಿಗೆ ಮಾಂಸದೂಟದ ಬಯಕೆಯಾಗಿದೆ. ಹಾಗಾಗಿ ನಾಳೆ ಮಾಂಸದೂಟದ ಸವಿಯ ಖುಷಿಯನ್ನು ಆಸ್ವಾದಿಸುತ್ತಲೇ ಅರೆ ನಿದ್ರೆಗೆ ಜಾರಿದ್ದಾನೆ. ಆದರೆ ನಿದ್ರೆಯಲ್ಲಿರುವಾಗ ಆತನಿಗೆ ಮಾಂಸದಡುಗೆಗಾಗಿ ಮೇಕೆಯನ್ನು ಕತ್ತರಿಸುತ್ತಿರುವಂತೆ ಕನಸು ಬಿದ್ದಿದ್ದು, ಇದೇ ಗುಂಗಿನಲ್ಲಿ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ ಅಂದರೆ ನಂಬುತ್ತೀರಾ? ಆದರೆ ಇಂತಹ ಒಂದು ಆಘಾತಕಾರಿ ಘಟನೆ ಘಾನಾದಲ್ಲಿ ನಡೆದಿದೆ.

ಆಗಸ್ಟ್ 12ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೊಫಿ ಆಟ್ಟಾ ಎಂಬಾತ ಕುರ್ಚಿಯಲ್ಲಿ ಕುಳಿತು ಅರೆ ನಿದ್ರೆಯಲ್ಲಿ ಇದ್ದ. ಈ ವೇಳೆ ಆತನಿಗೆ ಮೇಕೆ ಕತ್ತರಿಸುವ ಕನಸು ಬಿದ್ದಿದೆ. ಇದೇ ಗುಂಗಿನಲ್ಲಿ ಅಡುಗೆ ಮನೆಗೆ ತೆರಳಿ ಚಾಕು ತೆಗೆದುಕೊಂಡು ಬಂದು ತನ್ನ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.

ಆತನ ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೊಫಿ ಆಟ್ಟಾನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ನಡೆದ ವೇಳೆ ಆತನ ಪತ್ನಿ ಮನೆಯಲ್ಲಿ ಇರಲಿಲ್ಲ. ನಂತರ ಆಕೆಗೆ ನೆರೆಹೊರೆಯವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ.

https://twitter.com/Serwaa_Amihere/status/1559203103487959053?ref_src=twsrc%5Etfw%7Ctwcamp%5Etweetembed%7Ctwterm%5E1559203103487959053%7Ctwgr%5Eb4dfc0f5cff255079613aa6c841e8732b800200e%7Ctwcon%5Es1_c10&ref_url=http%3A%2F%2Fapi-news.dailyhunt.in%2F

ವೈದ್ಯರು ಕೂಡ ಈತ ಹೇಳಿದ ಕಥೆ ಕೇಳಿ ಅಚ್ಚರಿಗೊಳಗಾಗಿದ್ದಾರೆ. ಕತ್ತರಿಸಿಕೊಂಡಿರುವ ಮರ್ಮಾಂಗವನ್ನು ಮರುಜೋಡಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಈ ಪ್ರಕರಣ ನಿದ್ರೆಯಲ್ಲಿ ಕನಸು ಕಾಣುವವರಿಗೆ ಎಚ್ಚರಿಕೆಯ ಗಂಟೆಯಾಗಬಹದೇ ?