ಶನಿವಾರ, 7 ನವೆಂಬರ್ 2026

ಮಹಿಳಾ ಮೀಸಲಾತಿಗೆ ತಡೆಯೊಡ್ಡಿದ ಕಾಂಗ್ರೆಸ್ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಸಿಬಳಿದಂತಾಗಿದೆ-ಹರೀಶ್ ಪೂಂಜ

Harish poonja
Advertisement
Advertisement

ಬೆಳ್ತಂಗಡಿ:ಎ.18:ಬದಲಾಗುತ್ತಿರುವ ಕಾಲಘಟ್ಟದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಶೇ.33 ಮಹಿಳೆಯರಿಗೆ ಮೀಸಲಿಡುವ ಐತಿಹಾಸಿಕ ಮಸೂದೆಯನ್ನು ಲೋಕಸಭೆಯಲ್ಲಿ ಮೂರನೇ ಎರಡು ಬಹುಮತ ಪಡೆಯದಂತೆ ತಡೆಯೊಡ್ಡಿ ಇದೀಗ ವಿಘ್ನ ಸಂತೋಷಿಗಳಂತೆ ಸಂಭ್ರಮ ಆಚರಿಸುತ್ತಿರುವುದು ಮಹಿಳೆಯರಿಗೆ ಮಾಡಿದ ದ್ರೋಹದ ಜೊತೆಗೆ ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಂತಾಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಟುವಾಗಿ ಟೀಕಿಸಿದ್ದಾರೆ.

Sponsored

ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವದ ಕಗ್ಗೋಲೆ ನಡೆಸುತ್ತಿರುವುದು ಕಾಂಗ್ರೆಸ್ ಗೆ ರಕ್ತಗತ ಚಾಳಿಯಾಗಿದೆ.

Advertisement
Advertisement

ಅನೇಕ ಬಾರಿ 356ನೇ ವಿಧಿ ಪ್ರಯೋಗಿಸಿ ಚುನಾಯಿತ ಸರಕಾರಗಳ ವಜಾ, 1975ರಲ್ಲಿ ಅಲಹಾಬಾದ್ ಉಚ್ಚ ತೀರ್ಪಿಗೆ ವ್ಯತಿರಿಕ್ತವಾಗಿ ತುರ್ತು ಪರಿಸ್ಥಿತಿ ಘೋಷಣೆ, ರಾಜ್ಯಪಾಲರನ್ನು ಕೈಗೊಂಬೆ ಮಾಡಿ ಸಂವಿಧಾನ ಬಾಹಿರ ಕೃತ್ಯ ಎಸಗುವುದು ಕಾಂಗ್ರೆಸ್ ನ ಚರಿತ್ರೆಯ ಕರಾಳ ಮುಖವಾಗಿದೆ. ಇದೀಗ ತಾನೇ ಈ ಹಿಂದೆ ತರಲೆತ್ನಿಸಿದ ಮಹಿಳಾ ಮೀಸಲಾತಿ ಮಸೂದೆಗೆ ನರೇಂದ್ರ ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ತಡೆಹಿಡಿದಿದ್ದು ಮಹಿಳೆಯರ ಪರ ಕಾಂಗ್ರೆಸ್ ಪಕ್ಷ ನಿಲುವು ಏನೆಂಬುದು ಬಟಾಬಯಲಾಗಿದೆ.

Advertisement

ತಂತ್ರಜ್ಞಾನ ಯುಗದಡೆಗೆ ದಾಪುಗಾಲಿಡುವ ಇಂದಿನ ದಿನದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ (ಇವಿಎಂ) ವಿದ್ಯುನ್ಮಾನ ಮತಯಂತ್ರದಿಂದ ಬ್ಯಾಲೆಟ್ ಪೇಪರ್ ಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಉದ್ದೇಶಿಸಿದೆ. ಇಂತಹ ಮನಸ್ಥಿತಿಯಿರುವ ಕಾಂಗ್ರೆಸ್ ಪಕ್ಷದ ಜನ ಪ್ರತಿನಿಧಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Advertisement
Advertisement