ಸೋಮವಾರ, 26 ಅಕ್ಟೋಬರ್ 2026
Trending

LPG: ಇನ್ಮುಂದೆ ಬೇಡ LPG ಸಮಸ್ಯೆಯ ಚಿಂತೆ – ಯಾವ ಪ್ರೂಫ್ ಇಲ್ದೆ ಸಿಗಲಿದೆ 5 ಕೆಜಿ ಸಿಲಿಂಡರ್! ಹೇಗೆ ಪಡೆಯುವುದು?

LPG: ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಗತ್ತಿನಾದ್ಯಂತ ಎಲ್ ಪಿ ಜಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ. ಭಾರತದಲ್ಲಂತೂಇದರ ಸಮಸ್ಯೆ ತುಸು ಹೆಚ್ಚು ಎಂದು ಹೇಳಬಹುದು. ಎಲ್ಪಿಜಿ ಸಮಸೆಯಿಂದ ಜನರನ್ನು ಪಾರು ಮಾಡಲು ಭಾರತ ಸರ್ಕಾರವು ಸತತವಾಗಿ ಪ್ರಯತ್ನಿಸುತ್ತಿದೆ. ಈ ಬೆನ್ನನಲ್ಲೇ ಇದೀಗ ಕೇಂದ್ರ ಸರ್ಕಾರವು ಜನರಿಗೆ ನೆರವಾಗಲೆಂದು 5 ಕೆಜಿ ಸಿಲಿಂಡರನ್ನು ವಿತರಿಸಲು ಮುಂದಾಗಿದೆ. 

Sponsored

ಭಾರತೀಯ ನಾಗರಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಸ್ಥಳೀಯ ವಿಳಾಸದ ದಾಖಲೆ ಇಲ್ಲದವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 5 ಕೆಜಿ ತೂಕದ FTL (Free Trade LPG) ಸಿಲಿಂಡರ್‌ಗಳ ನಿಯಮವನ್ನು ಸರಳಗೊಳಿಸಿದೆ. ಹಾಗಿದ್ದರೆ ಇದನ್ನು ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

Advertisement
Advertisement

ಯಾವ ದಾಖಲೆಗಳು ಬೇಕು?

5 ಕೆಜಿಯ ಸಿಲಿಂಡರ್ ಅನ್ನೋ ಪಡೆಯಲು ಬಾಡಿಗೆ ಕರಾರು ಅಥವಾ ವಿಳಾಸದ ದಾಖಲೆಗಳ ಅಗತ್ಯವಿಲ್ಲ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯನ್ನು ಸಿದ್ಧವಾಗಿಟ್ಟುಕೊಳ್ಳಿ ಸಾಕು. 

ಎಲ್ಲಿ ಸಿಗುತ್ತೆ?

ನಿಮ್ಮ ಹತ್ತಿರದ ಗ್ಯಾಸ್ ವಿತರಕರು (Indane, HP, Bharat Gas), ಆಯ್ದ ಪೆಟ್ರೋಲ್ ಬಂಕ್‌ಗಳು ಅಥವಾ ಕಿರಣಾ ಅಂಗಡಿಗಳಿಗೆ ಭೇಟಿ ನೀಡಿ ವಿಳಾಸದ ದಾಖಲೆ ಇಲ್ಲದೆ ‘ಛೋಟು’ (Chhotu) ಅಥವಾ 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ಬೇಕೆಂದು ಕೇಳಿ. ಹಣ ಪಾವತಿಸಿ ತಕ್ಷಣವೇ ಸಿಲಿಂಡರ್ ಪಡೆಯಿರಿ.

ನಗರ ಪ್ರದೇಶಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಕಡಿಮೆ ಅನಿಲ ಬಳಸುವ ಸಣ್ಣ ಕುಟುಂಬಗಳಿಗೆ ಈ ಕ್ರಮವು ವರದಾನವಾಗಲಿದೆ. ಕಳೆದ ಮಾರ್ಚ್ 23 ರಿಂದ ಈವರೆಗೆ ಸುಮಾರು 5.7 ಲಕ್ಷ ಇಂತಹ ಸಣ್ಣ ಸಿಲಿಂಡರ್‌ಗಳು ಮಾರಾಟವಾಗಿವೆ. ಏಪ್ರಿಲ್ 4 ರಂದು ಒಂದೇ ದಿನ 71,000 ಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗುವ ಮೂಲಕ ಭಾರಿ ಬೇಡಿಕೆ ವ್ಯಕ್ತವಾಗಿದೆ.

Advertisement