ಶನಿವಾರ, 24 ಅಕ್ಟೋಬರ್ 2026

ಎಲ್‌ಪಿಜಿ ಬಿಕ್ಕಟ್ಟು: ಪಡಿತರ ಅಂಗಡಿಗಳಲ್ಲಿ ದೊರಕಲಿದೆ ಸೀಮೆಎಣ್ಣೆ

ನವದೆಹಲಿ: ಭಾರತದಲ್ಲಿ ಮತ್ತೆ ಅಡುಗೆ ಮನೆಗೆ ಅಡುಗೆ ಸೀಮೆಎಣ್ಣೆ ಬಳಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಗುರುವಾರ ರಾಜ್ಯಗಳಿಗೆ ಕೇಂದ್ರ 1 ಲಕ್ಷ ಕಿಲೋಲೀಟರ್‌ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್‌ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಪ್ರಾಥಮಿಕವಾಗಿ ಪಡಿತರ ಅಂಗಡಿಗಳ ಮೂಲಕ ಸೀಮೆಎಣ್ಣೆಯನ್ನು ವಿತರಿಸಲಾಗುತ್ತದೆ.

ಇನ್ನು ಉಳಿದ ಹಾಗೆ ಹೋಟೆಲ್‌, ರೆಸ್ಟೋರೆಂಟ್‌ಗಳು ಪರ್ಯಾಯ ಇಂಧನದ ರೂಪದಲ್ಲಿ ಬಯೋಮಾಸ್‌, ಆರ್‌ಡಿಎಫ್‌ ಪೆಲೆಟ್‌ಗಳು ಮತ್ತು ಕಲ್ಲಿದ್ದಲ್ಲನ್ನು ಒಂದು ತಿಂಗಳ ಕಾಲ ಬಳಸು ಅನುಮತಿ ನೀಡುವಂತೆ ಪರಿಸರ ಸಂಸ್ಥೆಗಳನ್ನು ಕೇಳಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ) ಸುಜಾತಾ ಶರ್ಮಾ ಪ್ರತಿಕ್ರಿಯಿಸಿ, ದೇಶವು ಹಿಂದೆಂದೂ ಈ ರೀತಿಯ ಪರಿಸ್ಥಿತಿಯನ್ನು ನೋಡಿರಲಿಲ್ಲ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ದೇಶೀಯ ಸರಬರಾಜುಗಳ ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ಗ್ರಾಹಕರು ಈಗ 45 ದಿನಗಳ ನಂತರ ಮಾತ್ರ ಸಿಲಿಂಡರ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.