ಸೋಮವಾರ, 26 ಅಕ್ಟೋಬರ್ 2026
Trending

ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಅಭಿಮಾನ, ಮಗುವಿಗೆ ʼಅನ್ನರಾಮಯ್ಯʼ ಎಂದು ನಾಮಕರಣ

ಬೀದರ್‌: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ಹಾಗೂ ಅವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಮೇಲಿನ ಪ್ರೀತಿಯಿಂದ ದಂಪತಿಯೊಬ್ಬರು ತಮ್ಮ 15 ದಿನಗಳ ಹಸುಗೂಸಿಗೆ ಅನ್ನರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ.

Sponsored

ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲೂಕಿನ ದುಗುಲಗುಂಡಿ ಗ್ರಾಮದ ರಾಜಪ್ಪ ಮತ್ತು ಅಂಬಿಕಾ ದಂಪತಿ ತಮ್ಮ ನವಜಾತ ಶಿಶುವಿಗೆ ಹೆಸರಿಟ್ಟು ವಿಶೇಷ ಅಭಿಮಾನ ಮೆರೆದಿದ್ದಾರೆ. ಅನ್ನಭಾಗ್ಯ ಯೋಜನೆಯ ಹೆಸರಿನ ʼಅನ್ನʼ ಪದ ಹಾಗೂ ಸಿದ್ದರಾಮಯ್ಯ ಅವರ ಹೆಸರಿನ ರಾಮಯ್ಯ ಒಟ್ಟುಗೂಡಿಸಿ ತಮ್ಮ ಮಗುವಿನ ಅನ್ನರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಮಗುವಿನ ಜನನಕ್ಕೂ ಮುನ್ನವೇ ಈ ದಂಪತಿ ಈ ನಿರ್ಧಾರ ಮಾಡಿದ್ದರು.

Advertisement
Advertisement

ದುಗುಲಗುಂಡಿ ಗ್ರಾಮದ ರಾಜಪ್ಪ-ಅಂಬಿಕಾ ದಂಪತಿಯ ಈ ವಿಭಿನ್ನ ನಾಮಕರಣದ ವಿಚಾರ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ.

Advertisement