ಶನಿವಾರ, 24 ಅಕ್ಟೋಬರ್ 2026

ಪುತ್ತೂರು : ದರ್ಬೆತ್ತಡ್ಕ ಸಿಡಿಲು ಬಡಿದು ಕೃಷಿಕ ಮೃತ್ಯು

ಪುತ್ತೂರು:ಅ.30ರ೦ದು ಸ೦ಜೆ ದರ್ಬೆತ್ತಡ್ಕದಲ್ಲಿ ಸಿಡಿಲು ಬಡಿದು ಕೃಷಿಕರೊಬ್ಬರು ಮೃತಪಟ್ಟಿದ್ದಾರೆ.

ದರ್ಬೆತ್ತಡ್ಕ ನಿವಾಸಿ ಕೃಷಿಕ ಪುರುಷೋತ್ತಮ ಪೂಜಾರಿ (47ವ)ರವರು ಮೃತಪಟ್ಟವರು.ಪುರುಷೋತ್ತಮ ಪೂಜಾರಿ ಅವರು ಸಂಜೆ ಮನೆಯೊಳಗಿದ್ದ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು
.ತಕ್ಷಣ ಅವರನ್ನು ಮನೆ ಮಂದಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ ಗೀತಾ, ಪುತ್ರಿ ಬಬಿತಾ ಅವರನ್ನು ಅಗಲಿದ್ದಾರೆ. ಮೂಲತಃ ಸುಳ್ಯದವರಾಗಿರುವ ಪುರುಷೋತ್ತಮ ಪೂಜಾರಿ ಅವರು ದರ್ಬೆತಡ್ಕದಿಂದ ವಿವಾಹವಾಗಿದ್ದು ಮನೆಯ ಅಳಿಯನಾಗಿದ್ದರು. ಘಟನೆಯಿಂದ ಮನೆಗೂ ಹಾನಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ