ಶನಿವಾರ, 24 ಅಕ್ಟೋಬರ್ 2026

CM Yogi Adityanath: ‘ಮುಸ್ಲಿಮರು ಹಚ್ಚಿದ ಬೆಂಕಿಗೆ ಖರ್ಗೆ ತಾಯಿ ಬಲಿ’ – ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ ಸಿಎಂ ಯೋಗಿ ಆದಿತ್ಯನಾಥ್, ಹಾಗಿದ್ರೆ ಅಂದು ನಡೆದದ್ದೇನು

CM Yogi Adityanath: ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ತಾಯಿ ಕೊನೆ ಉಸಿರೆಳೆದಿದ್ದು ಮುಸ್ಲಿಂರ ಅಗ್ನಿ ಜ್ವಾಲೆಗೆ. ಮುಸ್ಲಿಮರು ಹಚ್ಚಿದ ಬೆಂಕಿಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ನೀವು ಮರೆತೀರಾ ಎಂದು ಖರ್ಗೆಗೆ ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನೆನಪಿಸಿದ್ದಾರೆ.

CM Yogi Adityanath: ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ತಾಯಿ ಕೊನೆ ಉಸಿರೆಳೆದಿದ್ದು ಮುಸ್ಲಿಂರ ಅಗ್ನಿ ಜ್ವಾಲೆಗೆ. ಮುಸ್ಲಿಮರು ಹಚ್ಚಿದ ಬೆಂಕಿಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ನೀವು ಮರೆತೀರಾ ಎಂದು ಖರ್ಗೆಗೆ ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನೆನಪಿಸಿದ್ದಾರೆ.

ಕೆಲದಿನಗಳ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಭಯೋತ್ಪಾದಕರಿಗೆ ಹೋಲಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೊಸ ವಿವಾದವನ್ನೇ ಸಷ್ಟಿಸಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆಯವರ ಈ ಮಾತಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರದ ಅಚಲಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದು ಈ ವೇಳೆ ನಾನೊಬ್ಬ ಯೋಗಿ, ಯೋಗಿಗೆ ದೇಶವೇ ಮೊದಲು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿಮಗೆ ತುಷ್ಟೀಕರಣ ನೀತಿ ಮೊದಲು. ನಾನು ಖರ್ಗೆ ಅವರಿಗೆ ಹೇಳುತ್ತಿದ್ದೇನೆ. ಒಬ್ಬ ಯೋಗಿಗೆ ದೇಶವು ಮೊದಲು ಬರುತ್ತದೆ. ನನ್ನ ನಾಯಕ ಮೋದಿಯವರಿಗೂ ದೇಶವೇ ಮೊದಲು. ಆದರೆ ನಿಮಗೆ ಕಾಂಗ್ರೆಸ್ ತುಷ್ಟೀಕರಣವೇ ಮೊದಲು ಎಂದು ಹೇಳಿದರು.

ಅಲ್ಲದೆ ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಕಾಂಗ್ರೆಸ್‌ ನ ಅಂದಿನ ನಾಯಕತ್ವ ಮುಸ್ಲಿಂ ಲೀಗ್‌ನ ಸಹಯೋಗದಲ್ಲಿ ಮೌನ ವಹಿಸಿತ್ತು. ಆದ್ದರಿಂದಲೇ ಆ ಸಮಯದಲ್ಲಿ ಮುಸ್ಲಿಂ ಲೀಗ್ ಹಿಂದೂಗಳನ್ನು ಆಯ್ದು ಕೊಲ್ಲುತ್ತಿತ್ತು. ಇದೇ ಬೆಂಕಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಾಮವೂ ಸುಟ್ಟು ಕರಕಲಾಗಿದ್ದು, ಅವರ ತಾಯಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದರು. ಆದರೆ ಖರ್ಗೆಯವರು ಇದನ್ನು ಹೇಳುವುದಿಲ್ಲ ಏಕೆಂದರೆ ಅವರು ಆ ಮಾತುಗಳನ್ನು ಆಡಿದರೆ ಮುಸ್ಲಿಂ ಮತಗಳು ನುಣುಚಿಕೊಳ್ಳುತ್ತವೆ ಎಂದು ತಿಳಿದಿದೆ. ಮತ ಬ್ಯಾಂಕ್‌ಗಾಗಿ ಕುಟುಂಬದವರ ತ್ಯಾಗವನ್ನು ಖರ್ಗೆ ಮರೆತಿದ್ದಾರೆ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ