ಸೋಮವಾರ, 26 ಅಕ್ಟೋಬರ್ 2026
Trending

ಕೆದ್ದು ಹಾಸ್ಟೆಲ್ ಆವರಣದಲ್ಲಿ ಕಾಣಿಸಿಕೊಂಡ ಬ್ರಹತ್ ಗಾತ್ರದ ಕಾಳಿಂಗ ಸರ್ಪ!

Advertisement

ಬೆಳ್ತಂಗಡಿ: ತಾಲೂಕಿನ ಕೆದ್ದು ಹಾಸ್ಟೆಲ್ ಆವರಣದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು  ಪ್ರತ್ಯಕ್ಷಗೊಂಡು, ತಕ್ಷಣವೇ ಕಾರ್ಯಪ್ರವೃತರಾದ ಉರಗ ರಕ್ಷಕರು ಹಾವುವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡುವ ಮೂಲಕ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ.

Sponsored

ಕೆದ್ದು ಹಾಸ್ಟೆಲ್‌ ಆವರಣದಲ್ಲಿ ಎಂದಿನಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬೃಹತ್ ಗಾತ್ರದ ಕಾಳಿಂಗ ಸರ್ಪವು ಕಾಣಿಸಿಕೊಂಡಿದೆ.

Advertisement
Advertisement

ಕೂಡಲೇ ಎಚ್ಚೆತ್ತುಕೊಂಡ ಹಾಸ್ಟೆಲ್ ಸಿಬ್ಬಂದಿ ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಅಶೋಕ್ ಬೆಳ್ತಂಗಡಿ ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್, ಅತ್ಯಂತ ಎಚ್ಚರಿಕೆ ಹಾಗೂ ನಿಪುಣತೆಯಿಂದ ಕಾಳಿಂಗ ಸರ್ಪವನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದರು. ಹಾವು ಸುರಕ್ಷಿತವಾಗಿ ಸೆರೆಸಿಕ್ಕಿದ ನಂತರ ಕಾಳಿಂಗ ಸರ್ಪವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ನಿರ್ಜನ ಕಾಲಿನ ಪ್ರದೇಶದಲ್ಲಿ (ಅರಣ್ಯಕ್ಕೆ) ಬಿಡಲಾಗಿದೆ ಎಂದು ಉರಗ ರಕ್ಷಕ ಅಶೋಕ್ ತಿಳಿಸಿದ್ದಾರೆ.

Advertisement
div class="ere-sticky">