ಕೇರಳ : ಕಾಸರಗೋಡಿನ ಮಡಿಕೈ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗನವಾಡಿ ಮೈದಾನದಲ್ಲಿ ಆಟವಾಡುತ್ತಿದ್ದಾಗ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿ 11 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕ ಅನೇಕ್ ಎಂದು ಗುರುತ್ತಿಸಲಾಗಿದೆ ಬಾಲಕ ಶಾಲೆಯಿಂದ ಬಂದ ನಂತರ ಮನೆ ಹತ್ತಿರವಿದ್ದ ಧ್ವಜಸ್ತಂಭದ ಬಳಿ ಆಟವಾಡೋದಕ್ಕಾಗಿ ತೆರಳಿದ್ದಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಚಾಲಕರೊಬ್ಬರು ಧ್ವಜಸ್ತಂಭ ಬಳಿ ಬಾಲಕ ನೇತಾಡುತ್ತಿರುವುದನ್ನು ಕಂಡು ಸ್ಥಳೀಯರಿಗೆ ಮಾಹಿತಿ ತಿಳಿಸಿದಲ್ಲದೇ ಸ್ಥಳಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ
ಅಯ್ಯೋ ವಿಧಿಯೇ..! ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿ 11 ವರ್ಷದ ಬಾಲಕ ಸಾವು



