ಶನಿವಾರ, 24 ಅಕ್ಟೋಬರ್ 2026

ಕರ್ನಾಟಕ‌ ಟಿವಿ ಲೀಡರ್ ಅವಾರ್ಡ್ಸ್ 2025: ಬೆಸ್ಟ್ MLA ಆಗಿ ಶಾಸಕ ಹರೀಶ್ ಪೂಂಜಾ ಆಯ್ಕೆ, ಪ್ರಶಸ್ತಿ ಸ್ವೀಕಾರ

ಬೆಂಗಳೂರು: ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ಬೆಸ್ಟ್ ಎಂಎಲ್ಎ ಆಗಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾರವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಬಿಜೆಪಿ ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಕರ್ನಾಟಕ ಟಿವಿಯವರು ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ಬೆಸ್ಟ್ MLA ಪ್ರಶಸ್ತಿ ಪಡೆದ ಶಾಸಕರನ್ನು, ಆಯಾ ತಾಲೂಕುಗಳಲ್ಲಿ ಜನರನ್ನು ಭೇಟಿಯಾಗಿ ಸರ್ವೇ ನಡೆಸಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಸಚಿವರಾದ ಬೆಂಗಳೂರು ನಗರಾಭಿವೃದ್ಧಿ ಸಚಿವ ಶ್ರೀ ಕೃಷ್ಣ ಬೈರೇಗೌಡರವರು ಶ್ರೀ ಹರೀಶ್ ಪೂಂಜಾರವರಿಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಿದರು.