ಶನಿವಾರ, 24 ಅಕ್ಟೋಬರ್ 2026

Mysore Dasara: ಭರ್ಜರಿ ದಸರಾ ಕೊಡುಗೆ ನೀಡಿದ ಸರಕಾರ; ವಾಹನಗಳಿಗೆ ತೆರಿಗೆ ವಿನಾಯಿತಿ ಘೋಷಣೆ!

Mysore Dasara

Mysore Dasara: ಮೈಸೂರು ದಸರಾ ಪ್ರಾರಂಭವಾಗಿದ್ದು, ಈ ಅಭೂತಪೂರ್ವ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಹೊರ ರಾಜ್ಯದದಿಂದ ಬರುವ ವಾಹನ ಸವಾರರಿಗೆ ತೆರಿಗೆ ವಿನಾಯಿತಿ ನೀಡಿ ಸರಕಾರ ಆದೇಶ ಹೊರಡಿಸಿದೆ. ಅ.16ರಿಂದ ಅ.24 ರವರೆಗೆ ಈ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌, ಜಲಾಶಯ ವೀಕ್ಷಿಸಲು, ಕರ್ನಾಟಕ ಹೊರತುಪಡಿಸಿ, ಇತರೆ ರಾಜ್ಯಗಳ ನೋಂದಣಿ ಇರುವ, ಆ ರಾಜ್ಯಗಳಲ್ಲಿ ತೆರಿಗೆ ಪಾವತಿಸಿರುವ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ತೆರಿಗೆ ವಿನಾಯಿತಿ ನೀಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ