ಶನಿವಾರ, 24 ಅಕ್ಟೋಬರ್ 2026

‘ಕನ್ನಡ ಪ್ರಭ’ ನೂತನ ಸಂಪಾದಕರಾಗಿ ಜೋಗಿ ನೇಮಕ

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ಕನ್ನಡ ಪ್ರಭ ದಿನ ಪತ್ರಿಕೆಯ ಸಂಪಾದಕರಾಗಿ ಜೋಗಿ ಎಂದೇ ಖ್ಯಾತರಾಗಿರುವ ಪ್ರಸಿದ್ಧ ಸಾಹಿತಿ, ಬರಹಗಾರ, ವಿಮರ್ಶಕ, ಅಂಕಣಕಾರರಾಗಿರುವ ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ನೇಮಕಗೊಂಡಿದ್ದಾರೆ.

ಕನ್ನಡಪ್ರಭ ಪತ್ರಿಕೆಗೆ `ಬಾಲಿವುಡ್ ಗಾಸಿಪ್’ ಎಂಬ ಅಂಕಣ ಬರೆಯುತ್ತಿದ್ದ ಜೋಗಿ ಅವರ `ಹಾಯ್ ಬೆಂಗಳೂರು’ ಪತ್ರಿಕೆಯ ರವಿ ಕಾಣದ್ದು ಅಂಕಣ ಹೆಸರುವಾಸಿಯಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಜೋಗಿ ಅವರು `ಅಚ್ಚರಿ’ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾಗಿದ್ದ ಜೋಗಿ  ಇದೀಗ ಕನ್ನಡಪ್ರಭದ ಸಂಪಾದಕರಾಗಿ ಮುಂಬಡ್ತಿ ಪಡೆದಿದ್ದಾರೆ. 

ಮೂಲತಃ ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಅವರು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಯಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಿಕಾಂ ಪದವೀಧರರಾದ ಜೋಗಿ ಅವರು 18ನೇ ವಯಸ್ಸಿಗೆ ತಮ್ಮ ಬರಹವನ್ನು ಆರಂಭಿಸಿದ್ದರು. ಬೆಂಗಳೂರಿಗೆ 1989ರಲ್ಲಿ ಕಾಲಿಟ್ಟ ಗಿರೀಶ್ ರಾವ್ ಅವರು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಓದುಗರಿಗೆ ಪರಿಚಿತರಾದವರು.