ಭಾನುವಾರ, 25 ಅಕ್ಟೋಬರ್ 2026
Trending

ಗ್ರಾಹಕರಿಗೆ ಕಹಿ ಅನುಭವ ನೀಡಿದ ಬೆಲ್ಲ, ಸಕ್ಕರೆ

Using sugar
Image source: Mashed

ಬೆಂಗಳೂರು: ಸಕ್ಕರೆ, ಬೆಲ್ಲ ಜನ ಸಾಮಾನ್ಯರಿಗೆ ಮತ್ತೆ ಸಿಹಿ ಬದಲು ಕಹಿ ಅನುಭವ ನೀಡಿದೆ. ದರ ಏರಿಕೆಯ ಬಿಸಿ ಇನ್ನು ಗ್ರಾಹಕರಿಗೆ ಆಗಲಿದೆ.

Sponsored

ಬೆಲ್ಲದ ದರ ಕೆಜಿಗೆ ಏಕಾಏಕಿ 12 ರೂ. ಹೆಚ್ಚಳವಾಗಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆ 66 ರೂಪಾಯಿ ಇದ್ದ ಕೆಜಿ ಸಕ್ಕರೆ, ಇಂದು 70 ರೂ.ಗೆ ಏರಿಕೆಯಾಗಿದೆ.

ಬೆಲ್ಲ ನಾಲ್ಕು ದಿನದ ಹಿಂದೆ ಕೆಜಿಗೆ ರೂ.68 ಇತ್ತು. ಇಂದು 12 ರೂ ಏರಿಕೆ ಆಗಿದೆ. ಕೆಜಿಗೆ ರೂ.80 ತಲುಪಿದೆ.