ಜಾಲಿಗುಡ್ಡೆ: ತಾಯಿ, ಮಗ ನಾಪತ್ತೆ
ಮೂಡುಬಿದಿರೆ: ಶಿರ್ತಾಡಿ ಗ್ರಾಮದ ಜಾಲಿಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಬಳಿಯ ನಿವಾಸಿ ಗೀತಾ (39) ಹಾಗೂ ಮಗ ಯಶಸ್ (7) ನಾಪತ್ತೆಯಾಗಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sponsoredಮನೆವಾರ್ತೆ ಕೆಲಸ ಮಾಡಿಕೊಂಡಿದ್ದ ಗೀತಾ, ಅ.6 ರಂದು ಮಧ್ಯಾಹ್ನ ಮಗ ಯಶಸ್‌ನನ್ನು ಶಾಲೆಯಿಂದ ಕರೆದುಕೊಂಡು ಮೂಡುಬಿದಿರೆ ಪೇಟೆಗೆ ಹೋಗಿ ಬರುವುದಾಗಿ ನೆರೆಮನೆಯವರಿಗೆ ತಿಳಿಸಿ ತೆರಳಿದ್ದರು. ಆದರೆ ಮನೆಗೆ ಹೋಗದೆ, ಸಂಬಂಧಿಕರ ಮನೆಗೂ ಹೊಗದೆ ನಾಪತ್ತೆಯಾಗಿರುವುದಾಗಿ ಗೀತಾ ಅವರ ಗಂಡ ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.




