ಶನಿವಾರ, 24 ಅಕ್ಟೋಬರ್ 2026

HappyIndiGoDay: ಇಂಡಿಗೋ ವಿಮಾನ ಸಂಸ್ಥೆ ತನ್ನ ಗ್ರಾಹಕರಿಗೆ ನೀಡುತ್ತಿದೆ ವಿಮಾನ ಟಿಕೆಟ್‌ಗಳಲ್ಲಿ ರೂ.2000 ವರೆಗೆ ರಿಯಾಯಿತಿ!!!

ಈ ಕಂಪನಿಯು ಫ್ಲೈಟ್‌ ಟಿಕೆಟ್‌ಗಳನ್ನು ಬುಕ್‌ ಮಾಡುವ ಜನರಿಗೆ ರೂ.2000 ವರೆಗೆ ರಿಯಾಯಿತಿ (Indigo flight ticket discount) ನೀಡುತ್ತದೆ.

Indigo flight ticket discount
Image source: Hindustan Times

Indigo flight ticket discount: ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ಈ ಕಂಪನಿಯು ಫ್ಲೈಟ್‌ ಟಿಕೆಟ್‌ಗಳನ್ನು ಬುಕ್‌ ಮಾಡುವ ಜನರಿಗೆ ರೂ.2000 ವರೆಗೆ ರಿಯಾಯಿತಿ (Indigo flight ticket discount) ನೀಡುತ್ತದೆ. ಈ ಆಫರ್‌ ಮೂರು ದಿನಗಳವರೆಗೆ ಇದೆ. ಇಂಡಿಗೋ ಕಾರ್ಯಾಚರಣೆಯ 17ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಕಂಪನಿಯು ʼವಾರ್ಷಿಕೋತ್ಸವ ಮಾರಾಟʼ ವನ್ನು ನೀಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಕಂಪನಿಯ ಈ ಕೊಡುಗೆ ಇಂದೇ ಪ್ರಾರಂಭವಾಗಿದೆ ಅಂದರೆ ಆಗಸ್ಟ್‌ 2ರಂದು ಪ್ರಾರಂಭವಾಗಿ, ಆಗಸ್ಟ್ 4, 2022 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವವರಿಗೆ ನ್ಯಾಯಯುತ ಬೆಲೆಯಲ್ಲಿ 2000 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಅಷ್ಟೇ ಅಲ್ಲ, ಈ ಆಫರ್ ಅಡಿಯಲ್ಲಿ ಇಂಡಿಗೋ ಜನರು ತಮ್ಮ ನೆಚ್ಚಿನ ಸೀಟ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತಿದೆ. ಮೂರು ದಿನಗಳ ಮಾರಾಟದಲ್ಲಿ ಇದರ ಪಾವತಿಯು 17 ರೂ.ನಿಂದ ಪ್ರಾರಂಭವಾಗುತ್ತಿದೆ. ಈ ರಿಯಾಯಿತಿ ಎಲ್ಲಾ ರೀತಿಯ ಗ್ರಾಹಕರಿಗೆ ಲಭ್ಯವಿದೆ. ಕಂಪನಿಯು ಈ ಕೊಡುಗೆಗೆ ‘HappyIndiGoDay’ ಎಂದು ಹೆಸರಿಟ್ಟಿದೆ.

ಅಮೆರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಎಚ್‌ಎಸ್‌ಬಿಸಿಯ ಕ್ರೆಡಿಟ್‌ ಕಾರ್ಡ್‌ಗಳೊಂದಿಗೆ ಇಂಡಿಯೋ ಈ ಕೊಡುಗೆಗಾಗಿ ಒಪ್ಪಂದ ಮಾಡಿದೆ. ಜನರು ಆಗಸ್ಟ್‌ 2ರಂದು ಅಂದರೆ ಇಂದು ಟಿಕೆಟ್‌ ಬುಕಿಂಗ್‌ ಮಾಡಿದರೆ, ಅವರು ಶೇ.5ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಪಡೆಯುತ್ತಾರೆ. ಅಮೆರಿಕನ್‌ ಎಕ್ಸ್‌ಪ್ರೆಸ್‌ ಗ್ರಾಹಕರಿಗೆ ಇದು ಕನಿಷ್ಟ ಆರ್ಡರ್‌ ಮಭಲ್ಯ 5000 ರೂ.ಗಳ ಮೇಲೆ 2000 ರೂ. ಕ್ಯಾಶ್‌ಬ್ಯಾಕ್‌ ಆಗಿರುತ್ತದೆ.

ಇಂಡಿಗೋ ಏರ್‌ಲೈನ್ಸ್ ತನ್ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡುವ ಎಲ್ಲಾ ಟಿಕೆಟ್‌ಗಳಿಗೆ ಶೇಕಡಾ 12 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯು ಆಗಸ್ಟ್ 3 ರವರೆಗೆ ಲಭ್ಯವಿರುತ್ತದೆ. ಆದರೆ ಆಗಸ್ಟ್ 4 ರಂದು, ಟಿಕೆಟ್ ಬುಕ್‌ನಲ್ಲಿ ಕೇವಲ 7 ಶೇಕಡಾ ರಿಯಾಯಿತಿ ಮಾತ್ರ ಲಭ್ಯವಿರುತ್ತದೆ. ರಿಯಾಯಿತಿಯ ಮಿತಿ ರೂ.2,000 ವರೆಗೆ ಇರುತ್ತದೆ.

HSBC ಕ್ರೆಡಿಟ್ ಕಾರ್ಡ್‌ನಲ್ಲಿರುವಾಗ, ಜನರು 3500 ರೂ ಆರ್ಡರ್ ಮೌಲ್ಯದ ಮೇಲೆ 5 ಪ್ರತಿಶತದಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಕಾರ್ಡ್‌ನಲ್ಲಿನ ಕೊಡುಗೆಯು ಆಗಸ್ಟ್ 4 ರವರೆಗೆ ಮಾನ್ಯವಾಗಿರುತ್ತದೆ ಮತ್ತು ಗರಿಷ್ಠ ರಿಯಾಯಿತಿ ಮಿತಿ ರೂ.2,000 ಆಗಿದೆ.

ಇದನ್ನೂ ಓದಿ: ನಾಗರ ಪಂಚಮಿ: ಈ ಬಾರಿಯ ನಾಗರ ಪಂಚಮಿ ಯಾವಾಗ? ಎಷ್ಟು ಹಾವುಗಳ ಪೂಜೆ ನಡೆಯುತ್ತೆ ಗೊತ್ತಾ? ಈ ವಿಷ್ಯ ಕೇಳಿದ್ರೆ ಅಚ್ಚರಿ ಪಡ್ತೀರಾ!!