ಭಾನುವಾರ, 25 ಅಕ್ಟೋಬರ್ 2026
Trending

ಭಾರತದ ಖ್ಯಾತ ಫೈಟರ್ ಹೃಷಿಕೇಶ್ ಕರಡಿ ದಾಳಿಗೆ ಬಲಿ !!

ಭಾರತದ ಖ್ಯಾತ ಎಂಎಂಎ (MMA) ಫೈಟರ್ ಹೃಷಿಕೇಶ್ ಕೊಲೊತ್ ಕೆನಡಾದಲ್ಲಿ(Canada) ಕರಡಿ ದಾಳಿಗೆ ಬಲಿಯಗಿದ್ದಾರೆ. 

Sponsored

ಮೂಲತಃ ಕೇರಳದವರಾದ 27 ವರ್ಷದ ಹೃಷಿಕೇಶ್ ಕೊಲೊತ್,  ಮೂರು ವರ್ಷಗಳ ಹಿಂದೆ ಕೆನಡಾಕ್ಕೆ ತೆರಳಿದ್ದರು. ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್ (UFC) ನಲ್ಲಿ ಸ್ಪರ್ಧಿಸುವ ದೊಡ್ಡ ಕನಸು ಹೊತ್ತಿದ್ದರು. ಆದರೆ ಕೆನಡಾದ ಉತ್ತರ ಸಾಸ್ಕಾಚೆವನ್‌ನಲ್ಲಿರುವ ಯುರೇನಿಯಂ ಪರಿಶೋಧನಾ ಸ್ಥಳದಲ್ಲಿ ತಾಂತ್ರಿಕ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾಗ ಇವರ ಮೇಲೆ ಕರಡಿಯೊಂದು ಕ್ರೂರವಾಗಿ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದಿದ್ದ ಹೃಷಿಕೇಶ್, ಬರುವ ಜೂನ್ ತಿಂಗಳಿನಿಂದ ವ್ಯಾಂಕೋವರ್‌ನಲ್ಲಿ ಬಾಕ್ಸಿಂಗ್ ತರಬೇತುದಾರರಾಗಿ ಹೊಸ ಕೆಲಸವನ್ನು ಪ್ರಾರಂಭಿಸಬೇಕಿತ್ತು.  ಆದರೆ ವಿಧಿಯಾಟ ಬೇರೆಯೇ ಆಗಿದೆ.

ಹೃಷಿಕೇಶ್ ಅವರ ಅಣ್ಣ ಅರ್ಜುನ್ ಕೊಲೊತ್ ಪ್ರಸ್ತುತ ಅಂತ್ಯಕ್ರಿಯೆಗಾಗಿ ಕೇರಳಕ್ಕೆ ಬಂದಿದ್ದು, “ನನ್ನ ತಮ್ಮ ಯಾವುದಕ್ಕೂ ಹೆದರುತ್ತಿರಲಿಲ್ಲ, ಆತ ಕರಡಿಯೊಂದಿಗೆ ಧೈರ್ಯದಿಂದ ಹೋರಾಡಿದ್ದಾನೆ. ಆತನನ್ನು ಒಬ್ಬ ಹೋರಾಟಗಾರ ಮತ್ತು ಯೋಧನಾಗಿ ಜಗತ್ತು ನೆನಪಿನಲ್ಲಿಡಬೇಕು” ಎಂದು ಭಾವುಕರಾಗಿ ನುಡಿದಿದ್ದಾರೆ.