ಶನಿವಾರ, 24 ಅಕ್ಟೋಬರ್ 2026

ಆ.15ಕ್ಕೆ ಸಚಿವರ ಡ್ಯೂಟಿ ಫಿಕ್ಸ್; ನಿಮ್ಮ ಜಿಲ್ಲೆಗೆ ಯಾರು? ಇಲ್ಲಿದೆ ಪಟ್ಟಿ

ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ರಾಜ್ಯ ಸರ್ಕಾರ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ.

ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ವಿವಿಧ ಜಿಲ್ಲೆಗಳಿಗೆ ಸಚಿವರನ್ನು ನಿಯೋಜಿಸಿ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಸರ್ಕಾರದ ಪಟ್ಟಿಯಂತೆ ತುಮಕೂರಿನಲ್ಲಿ ಡಾ. ಜಿ. ಪರಮೇಶ್ವರ, ದಕ್ಷಿಣ ಕನ್ನಡದಲ್ಲಿ ಯು.ಟಿ. ಖಾದರ್, ಉಡುಪಿಯಲ್ಲಿ ರಹೀಮ್ ಖಾನ್, ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ, ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ, ಮೈಸೂರಿನಲ್ಲಿ ಡಾ. ಯತೀಂದ್ರ ಸಿದ್ಧರಾಮಯ್ಯ, ವಿಜಯನಗರದಲ್ಲಿ ಬಸವಂತಪ್ಪ ಹಾಗೂ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಉಳಿದ ಜಿಲ್ಲೆಗಳಲ್ಲೂ ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ. ನಿಯೋಜಿತ ಸಚಿವರು ಅನಾರೋಗ್ಯ ಅಥವಾ ಅನಿವಾರ್ಯ ಕಾರಣದಿಂದ ಗೈರಾದರೆ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಜಿಲ್ಲಾವಾರು ಸಚಿವರ ಪಟ್ಟಿ: