‘ಸಹಾ’ ಸಿನಿಮಾ ತಂಡದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ತಮ್ಮ ಸಿನಿಮಾ ಇಷ್ಟವಾಗಲಿಲ್ಲವೆಂದರೆ ನಡು ರಸ್ತೆಯಲ್ಲೇ ನಿಂತುಕೊಂಡು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಿನಿಮಾದ ನಾಯಕಿ ಬಹಿರಂಗವಾಗಿಯೇ ಪ್ರೇಕ್ಷಕರಿಗೆ ಸವಾಲು ಹಾಕಿರುವುದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.
Sponsoredತೆಲುಗಿನ ‘ಸಹಾ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾನಲ್ಲಿ ನಟಿ ಶ್ವೇತಾ ಲಕ್ಷ್ಮಣನ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ನಟಿ ಶ್ವೇತಾ ಲಕ್ಷ್ಮಣನ್, ‘ನಮ್ಮ ಬಳಿ ಹಣ ಇರಲಿಲ್ಲ, ಆದರೆ ಸಿನಿಮಾದ ಮೇಲೆ ನಂಬಿಕೆ ಇತ್ತು. ಎಲ್ಲರೂ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ದಯವಿಟ್ಟು ಸಿನಮಾ ನೋಡಿ’ ಎಂದರು.
ಅಲ್ಲದೆ ಸಿನಿಮಾ ನೋಡಿದ ನಂತರ ಯಾರಿಗಾದರೂ ನಿರಾಸೆಯಾದರೆ ತಮಗೇ ದೊಡ್ಡ ಶಿಕ್ಷೆ ವಿಧಿಸಿಕೊಳ್ಳುವುದಾಗಿ ಶ್ವೇತಾ ಹೇಳಿದ್ದಾರೆ. ಹೈದರಾಬಾದ್‌ನ ಅಮೀರ್‌ಪೇಟೆಯ ಮುಖ್ಯ ರಸ್ತೆಯಲ್ಲಿ ನಿಂತು ತಲೆಬೋಳಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಸೆಪ್ಟೆಂಬರ್ 4 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಾಯಕಿಯ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿನಿಮಾ ಬಿಡುಗಡೆಗೆ ಮುನ್ನವೇ ಚಿತ್ರತಂಡ ನೀಡುತ್ತಿರುವ ಇಂತಹ ಹೇಳಿಕೆಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಜನರಿಗೆ ಹೆಚ್ಚು ಪರಿಚಿತವಿಲ್ಲದ ಕಾರಣ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ತಂಡದವರು ಅತಿಯಾಗಿ ಹೊಗಳಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.




