ಶನಿವಾರ, 7 ನವೆಂಬರ್ 2026

Sonu Gowda: ‘ಪ್ರೀತಿ ಉಳಿಸಿಕೊಳ್ಳಲು ಟ್ರೈ ಮಾಡ್ದೆ, ಆದ್ರೆ ಅವ್ನು ಆ ವಿಡಿಯೋನ ಪಬ್ಲಿಶ್ ಮಾಡ್ಬಿಟ್ಟ’ – ಬಾಯ್‌ಫ್ರೆಂಡ್ ವಿಕೃತಿ ತೆರೆದಿಟ್ಟ ಸೋನು ಶ್ರೀನಿವಾಸ್ ಗೌಡ!

Advertisement
Advertisement

Sounu Gowda : ತನ್ನ ವಿಡಿಯೋಗಳ ಮುಖಾಂತರವೇ ನಾಡಿನಾದ್ಯಂತ ಫೇಮಸ್ ಆಗಿರುವ ಸೋಶಿಯಲ್ ಮೀಡಿಯಾ ಸ್ಟಾರ್, ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅವರ ಬಾಯ್ ಫ್ರೆಂಡ್ ಇತ್ತೀಚೆಗೆ ನಿಧನರಾಗಿದ್ದರು. ಇದನ್ನು ಸ್ವತಹ ಅವರೇ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದು ಕಣ್ಣೀರು ಹಾಕಿದ್ದರು. ಈ ವೇಳೆ ಸೋನು ಅವರು ಹಿಂದೊಮ್ಮೆ ತಮ್ಮ ವಿಡಿಯೋ ಲೀಕ್ ಆಗಿದ್ದ ಕುರಿತು ಮಾತನಾಡಿದ್ದಾರೆ.

Sponsored

ಇತ್ತೀಚೆಗಷ್ಟೇ ಸೋನು ಶ್ರೀನಿವಾಸ್ ಗೌಡ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಓರ್ವ ಹುಡುಗನ ಜೊತೆ ಸೋನು ಶ್ರೀನಿವಾಸ್ ಗೌಡ ಖುಷಿ ಖುಷಿಯಾಗಿ ಕಂಡು ಬಂದ ಫೋಟೋ ಇತ್ತು. ಅದಕ್ಕೆ, ‘ಮಿಸ್ ಯೂ ಎ ಲಾಟ್ ಬೇಬಿ ಮಾ’ ಎಂದು ಕ್ಯಾಪ್ಷನ್ ಕೊಟ್ಟಿದ್ದರು. RIP ಮತ್ತು ಲವರ್‌ ಎಂಬ ಹ್ಯಾಶ್‌ಟ್ಯಾಗ್ ಬಳಕೆ ಮಾಡಿದ್ದರು. ಅದನ್ನ ಕಂಡು ಸೋನು ಶ್ರೀನಿವಾಸ್ ಗೌಡ ಬಾಯ್‌ಫ್ರೆಂಡ್ ಸಾವನ್ನಪ್ಪಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೀಗ ಸೋನು ಶ್ರೀನಿವಾಸ್ ಗೌಡ ಉತ್ತರ ನೀಡಿದ್ದಾರೆ. ಇದೆ ವೇಳೆ ಹಿಂದೊಮ್ಮೆ ಅವರು ತಮ್ಮ ಬೆತ್ತಲೆ ವಿಡಿಯೋ ವೈರಲ್ ಹೇಗಾಯಿತು? ಯಾರು ಮಾಡಿದ್ದು? ಎಂದು ಹೇಳಿದ್ದಾರೆ.

Advertisement
Advertisement

ಹೌದು, ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಲೈಫ್ ಸ್ಟೋರಿ, ಲವ್‌ & ಬ್ರೇಕಪ್ ಕಹಾನಿಯನ್ನ ಎಳೆ ಎಳೆಯಾಗಿ ಸೋನು ಶ್ರೀನಿವಾಸ್ ಗೌಡ ತೆರೆದಿಡುತ್ತಿದ್ದಾರೆ. ಮೊದಲ ಲವ್ ಸ್ಟೋರಿ ಶುರುವಾಗಿದ್ದು ಹೇಗೆ, ಬ್ರೇಕಪ್ ಆಗಿದ್ದು ಹೇಗೆ ಎಂಬುದನ್ನ ಬಿಚ್ಚಿಟ್ಟಿದ್ದಾರೆ. ಆನಂತರ ಶುರುವಾದ ಆನ್‌ಲೈನ್‌ ಲವ್‌ನಿಂದ ಏನೇನಾಯ್ತು ಎಂದು ವಿವರಿಸಿದ್ದಾರೆ. 

Advertisement

ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಆತ ಒಂದು ದಿನ ‘ಆ ವಿಡಿಯೋ ಕಾಲ್‌ ಮಾಡು’ ಎಂದು ಬಲವಂತ ಮಾಡಿದ್ನಂತೆ. ಪ್ರೀತಿ ಉಳಿಸಿಕೊಳ್ಳುವ ಸಲುವಾಗಿ ಸೋನು ಶ್ರೀನಿವಾಸ್ ಗೌಡ ವಿಡಿಯೋ ಕಾಲ್ ಮಾಡಿದ್ದಾರೆ. ಅದೇ ವಿಡಿಯೋವನ್ನೇ ಇಟ್ಟುಕೊಂಡು ಬಾಯ್‌ಫ್ರೆಂಡ್‌ ಬ್ಲಾಕ್ ಮೇಲ್ ಶುರು ಮಾಡಿದ್ದಾನೆ. ಬ್ಲಾಕ್‌ ಮೇಲ್‌ನಿಂದ ರೋಸಿ ಹೋಗಿ ಸೋನು ಶ್ರೀನಿವಾಸ್ ಗೌಡ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರಂತೆ.

ಮತ್ತೆ ಮಾತನಾಡಿದ ಅವರು ನಾನು ಅವನಿಗೆ ಕಂಪ್ಲೇಂಟ್ ಕಾಪಿ ಕಳುಹಿಸಿದ ತಕ್ಷಣ, ಅವನು ನನಗೆ ಫುಲ್ ವಿಡಿಯೋ ಕಳುಹಿಸಿಬಿಟ್ಟ ಎಂದು ಹೇಳಿದ್ದಾರೆ. ಆ ವಿಡಿಯೋ ನೋಡಿ ನನಗೆ ನಡುಕ ಶುರುವಾಯ್ತು. ಒಂದ್ ಸೆಕೆಂಡ್‌ ಫೋನ್ ಕೆಳಗೆ ಬಿದ್ದು ಹೋಯ್ತು. ನನ್ನ ಲವ್‌ನ ಉಳಿಸಿಕೊಳ್ಳಲು ನಾನು ಈ ತರಹ ಮಾಡಿದ್ದು ತಪ್ಪಾ ಅಂತ ಅನಿಸಿತು, ಆ ಕ್ಷಣ ಇದನ್ನೆಲ್ಲಾ ಯಾರ ಬಳಿಯೂ ಹೇಳಿಕೊಂಡು ಅಳಲು ನನಗೆ ಶಕ್ತಿ ಇರಲಿಲ್ಲ. ತುಂಬಾ ಹಿಂಸೆ ಆಗ್ಬಿಡ್ತು ಎಂದು ಹೇಳಿದ್ದಾರೆ.

ಅಲ್ಲದೆ ಬಿಸಿ ತುಪ್ಪವನ್ನ ಬಾಯಲ್ಲಿ ಇಟ್ಟುಕೊಳ್ಳಲೂ ಆಗುತ್ತಿಲ್ಲ. ಹೊರಗೆ ಉಗಿಯೋಕೂ ಆಗ್ತಿಲ್ಲ. ನನ್ನ ಪರಿಸ್ಥಿತಿ ಒಂಥರಾ ಆಗಿತ್ತು. ಪ್ರತಿ ದಿನ ಅವನ ಮೆಸೇಜ್ ಬಂದಾಗೆಲ್ಲಾ ಕುಗ್ಗಿ ಕುಗ್ಗಿ ಸಾಯುತ್ತಿದ್ದೆ. ನನಗೆ ಪ್ರೀತಿ ಬೇಕು ಅಂತ ಹಂಬಲಿಸುತ್ತಿದ್ದೆ. ಆ ಟೈಮ್‌ನಲ್ಲಿ ನನ್ನ ಮನೆಗೆ ಬಂದ್ದಿದ್ದೇ ಬ್ರೀಝರ್ (ಶ್ವಾನ). ಇವನಿಂದ ನಾನು ಅಳುವನ್ನ ಕಂಟ್ರೋಲ್ ಮಾಡಿಕೊಂಡೆ. ಆಮೇಲೆ ಅವನ (ಬಾಯ್‌ಫ್ರೆಂಡ್) ನಂಬರ್‌ನ ನಾನು ಬ್ಲಾಕ್ ಮಾಡಿದೆ. ಇನ್ನೊಂದು ನಂಬರ್‌ನಿಂದ ಮೆಸೇಜ್ ಮಾಡಲು ಶುರು ಮಾಡಿದ. ‘ನನ್ನನ್ನೇ ಬ್ಲಾಕ್ ಮಾಡ್ತೀಯಾ’ ಅಂತ ಅವನು ಕೊನೆಗೂ ಆ ವಿಡಿಯೋನ ಪಬ್ಲಿಶ್ ಮಾಡಿಬಿಟ್ಟ’’ ಎಂದು ಹೇಳುವ ಮೂಲಕ ತಮ್ಮ ವಿಡಿಯೋ ಲೀಕ್‌ ಆಗಿದ್ದು ಹೇಗೆ ಎಂಬುದನ್ನ ಸೋನು ಶ್ರೀನಿವಾಸ್ ಗೌಡ ಬಹಿರಂಗ ಪಡಿಸಿದ್ದಾರೆ.

Advertisement
Advertisement