ಸೋಮವಾರ, 26 ಅಕ್ಟೋಬರ್ 2026
Trending

ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ-ಸ್ವಾಮೀಜಿ ಸೆರೆ

ಬೆಂಗಳೂರು: 25 ವರ್ಷದ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚನೆ ಮಾಡಿದ ಆರೋಪದಲ್ಲಿ ಹುಣಸಮಾರನಹಳ್ಳಿಯ ಮದ್ದಾವಣಪುರ ದೇವವೀರ ಸಂಸ್ಥಾನ ಮಠ ಸ್ವಾಮೀಜಿಯನ್ನು ಈಶಾನ್ಯ ವಿಭಾಗದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

Sponsored

ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅಲಿಯಾಸ್‌ ದಯಾನಂದ ಬಂಧಿತ ಆರೋಪಿ. ಸಂತ್ರಸ್ತೆ ನೀಡಿದ ದೂರಿನ ಮೇರೆ ಆರೋಪಿಯನ್ನು ಬಂಧನ ಮಾಡಲಾಗಿದೆ.

Advertisement
Advertisement

ಪ್ರಕರಣದ ವಿವರ:
ಸಂತ್ರಸ್ತೆ 10ನೇ ವಯಸ್ಸಿನಿಂದ ಮಠದ ಸಮೀಪದಲ್ಲಿ ತನ್ನ ಅತ್ತೆ ಮನೆಯಲ್ಲಿ ವಾಸವಾಗಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ನಡುವೆ ಸಂತ್ರಸ್ತೆ ಕುಟುಂಬ ಸದಸ್ಯರು ಹಾಗೂ ಆರೋಪಿ ಮೈಸೂರಿಗೆ ಪ್ರವಾಸಕ್ಕೆ ಹೋದಾಗ ಸಂತ್ರಸ್ತೆಯ ಮೊಬೈಲ್‌ ನಂಬರ್‌ ಪಡೆದು, ಆಕೆಯ ಜೊತೆ ಸಲುಗೆ ಬೆಳೆಸಿದ್ದಾರೆ. ನಂತರ ಮದುವೆಯಾಗುವ ಭರವಸೆ ನೀಡಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ.

ಇತ್ತೀಚೆಗೆ ಮದುವೆಯಾಗಲು ಸಾಧ್ಯವಿಲ್ಲ, ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾರೆ. ಸ್ವಾಮೀಜಿಯ ಸಹೋದರ ಕೂಡಾ ಸಂತ್ರಸ್ತೆಗೆ ಬೇರೆ ಯಾರನ್ನಾದರೂ ಮದುವೆಯಾಗು, ನಾವು ಕೊಡುವ ಹಣ ಪಡೆದು ಬೇರೆಡೆ ಹೋಗಿ ವಾಸವಾಗಬೇಕು, ಇಲ್ಲವಾದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.

2017 ರಲ್ಲಿ ಸ್ವಾಮೀಜಿ ಮತ್ತು ಯುವತಿಯೊಬ್ಬಳು ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವೈರಲ್‌ ಆಗಿತ್ತು. ಅದು ಗಲಾಟೆಯಾಗಿತ್ತು. ಜೊತೆಗೆ ಮಠಕ್ಕೆ ಸೇರಿದ್ದ ಸಾವಿರಾರು ಎಕರೆ ಜಮೀನಿನ ಬಗ್ಗೆಯೂ ಸ್ವಾಮೀಜಿಯ ವಿರುದ್ಧ ವಿವಾದ ಉಂಟಾಗಿತ್ತು.

Advertisement