ಆಪಲ್ನ ಅತ್ಯಂತ ಪ್ರೀಮಿಯಂ ಹಾಗೂ ಟಾಪ್ ಎಂಡ್ ಮಾಡೆಲ್ ಆದ ‘ಐಫೋನ್’ ಖರೀದಿಸಲು ಬಯಸುವವರಿಗೆ ಭರ್ಜರಿ ಸಿಹಿ ಸುದ್ದಿ ದೊರೆತಿದ್ದು, ಈ ಫೋನ್ ಅನ್ನು ಈಗ ಅತ್ಯಂತ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು.
Sponsoredಹೌದು, ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ (iPhone 17 Pro Max) ಈಗ ರಿಲಯನ್ಸ್ ಡಿಜಿಟಲ್ನ ಆನ್ಲೈನ್ ಸ್ಟೋರ್ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಇದರೊಂದಿಗೆ ಗ್ರಾಹಕರಿಗೆ ಇನ್ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಕೂಡ ಸಿಗಲಿದ್ದು, ಬೇಸ್ ಮಾಡೆಲ್ ಮೇಲೆ ಒಟ್ಟಾರೆಯಾಗಿ 10,000 ರೂಪಾಯಿಗೂ ಹೆಚ್ಚು ಹಣ ಉಳಿಸಬಹುದಾಗಿದೆ.
ಎಷ್ಟು ಕಡಿತವಾಗಿದೆ?
ಕಾಸ್ಮಿಕ್ ಆರೆಂಜ್ (Cosmic Orange) ಬಣ್ಣದ, 256 GB ಸ್ಟೋರೇಜ್ ಸಾಮರ್ಥ್ಯದ ಐಫೋನ್ 17 ಪ್ರೊ ಮ್ಯಾಕ್ಸ್ ಪ್ರಸ್ತುತ ರಿಲಯನ್ಸ್ ಡಿಜಿಟಲ್ನಲ್ಲಿ 1,42,490 ರೂಪಾಯಿಗೆ ಲಿಸ್ಟ್ ಮಾಡಲಾಗಿದೆ. ಆದರೆ ಭಾರತದಲ್ಲಿ ಇದರ ಅಧಿಕೃತ ಲಾಂಚ್ ಬೆಲೆ 1,49,900 ರೂಪಾಯಿ ಆಗಿತ್ತು. ಇದರರ್ಥ ಗ್ರಾಹಕರಿಗೆ ನೇರವಾಗಿ 7,410 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಈಗಾಗಲೇ ಆಪಲ್ ತನ್ನೆಲ್ಲಾ ಉತ್ಪನ್ನಗಳ ಬೆಲೆ ಏರಿಕೆ ಮಾಡಿದ್ದು, ಸದ್ಯಕ್ಕೆ ಐಫೋನ್ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಆದರೆ, ಶೀಘ್ರದಲ್ಲಿ ಐಫೋನ್ ಬೆಲೆಯಲ್ಲೂ ಭಾರೀ ಪ್ರಮಾಣದ ಏರಿಕೆಯಾಗಬಹುದು ಎನ್ನುವ ಸೂಚನೆ ಇದೆ. ಹಾಗಾಗಿ ಬೆಲೆ ಏರಿಕೆಗೂ ಮುನ್ನ ಐಫೋನ್ ಖರೀದಿ ಮಾಡಲು ಇದು ಸೂಕ್ತ ಸಮಯ.
ಬ್ಯಾಂಕ್ ಆಫರ್ ಮೂಲಕ ಮತ್ತಷ್ಟು ಲಾಭ!
ನೀವು ಆಯ್ದ ಬ್ಯಾಂಕ್ ಕಾರ್ಡ್ಗಳನ್ನು ಬಳಸುವ ಮೂಲಕ ಈ ಆಫರ್ ಅನ್ನು ಮತ್ತಷ್ಟು ಆಕರ್ಷಕವಾಗಿಸಬಹುದು. ಎಸ್ಬಿಐ (SBI), ಐಸಿಐಸಿಐ (ICICI) ಅಥವಾ ಆಕ್ಸಿಸ್ (Axis) ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ನಾನ್-ಇಎಂಐ (ಇಎಂಐ ಅಲ್ಲದ) ವಹಿವಾಟು ನಡೆಸುವ ಗ್ರಾಹಕರಿಗೆ 3,000 ರೂಪಾಯಿಗಳ ಹೆಚ್ಚುವರಿ ಇನ್ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಈ ಬ್ಯಾಂಕ್ ಆಫರ್ ಸೇರಿದರೆ ಫೋನಿನ ಎಫೆಕ್ಟಿವ್ (ಪರಿಣಾಮಕಾರಿ) ಬೆಲೆ 1,39,490 ರೂಪಾಯಿಗೆ ಇಳಿಯುತ್ತದೆ. ಅಂದರೆ ಗ್ರಾಹಕರಿಗೆ ಒಟ್ಟು 10,410 ರೂಪಾಯಿಗಳ ಭಾರಿ ಲಾಭವಾಗಲಿದೆ!
ಇನ್ನು ಇಎಂಐ (EMI) ವ್ಯವಸ್ಥೆಯಲ್ಲಿ ಖರೀದಿಸುವವರಿಗೂ ರಿಲಯನ್ಸ್ ಡಿಜಿಟಲ್ ದೊಡ್ಡ ಉಳಿತಾಯದ ಆಫರ್ ನೀಡಿದೆ. ಬ್ಯಾಂಕ್ ಮತ್ತು ಪೇಮೆಂಟ್ ಆಯ್ಕೆಗೆ ಅನುಗುಣವಾಗಿ, ಫ್ಲಾಟ್ ಡಿಸ್ಕೌಂಟ್ ಹೊರತುಪಡಿಸಿ ಒಟ್ಟು ಸೌಲಭ್ಯವು 6,000 ರೂಪಾಯಿಗಳವರೆಗೆ ಇರಲಿದೆ.




