ಎಂಆರ್‌ಪಿಎಲ್ ತೈಲ ಸ್ಥಾವರ ಘಟಕದಲ್ಲಿ ಭೀಕರ ಸ್ಫೋಟ ಆಗಿರುವುದನ್ನು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ದೃಢಪಡಿಸಿದ್ದಾರೆ. ಹೈಡ್ರೋ ಸಲ್ಫರ್ ಟ್ರೀಟ್ಮೆಂಟ್ ಘಟಕದಲ್ಲಿ ಸ್ಫೋಟ ಉಂಟಾಗಿದ್ದು ಬೆಂಕಿ ಮತ್ತು ಹೊಗೆಯೊಂದಿಗೆ ಸ್ಪೋಟವಾಗಿದೆ. ಈ ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂಎಉ ಕಮಿಷನರ್ ತಿಳಿಸಿದ್ದಾರೆ.
Sponsoredರಾಜೇಶ್ ಬ್ಯಾಪ್ಟಿಸ್ಟ್ (42) ಎಂಬುವರಿಗೆ ಶೇ.35 ಸುಟ್ಟ ಗಾಯವಾಗಿದ್ದು, ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯಕ್ಕೆ ಬೆಂಕಿ ನಂದಿಸಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಈ ಘಟನೆಯಲ್ಲಿ ಇತರ ಏಳು ಮಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ. ಇಂದ್ರಜಿತ್, ಪ್ರಸಾದ್, ರಮಣ್ ಎಂಬುವವರನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೆರೋಮ್, ಜಯರಾಮ್, ಅವಿನಾಶ್, ಅಕ್ಷಯ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಂಆರ್‌ಪಿಎಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೂಲಿಂಗ್‌ನಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿದೆ. ಎಂಆರ್‌ಪಿಎಲ್ ಸ್ಥಾವರಿಂದ ಏಳೆಂಟು ಕಿ.ಮೀ. ದೂರದಲ್ಲಿರುವ ಬಜ್ಪೆ ಏರ್ಪೋಟ್‌ನಲ್ಲಿ ಸ್ಫೋಟದ ತೀವ್ರತೆಗೆ ಕಂಪನ ಉಂಟಾಗಿದೆ. ವಿಮಾನಗಳ ಸಂಚಾರ ಯಥಾಸ್ಥಿತಿ ಇದೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಜೋಕಟ್ಟೆ ಏರಿಯಾದಲ್ಲಿ ಸ್ಫೋಟ ಉಂಟಾಗಿದ್ದು, ಇದರ ಶಬ್ದ 15ಕಿ.ಮೀ. ಪ್ರದೇಶದಲ್ಲಿ ಕೇಳಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ, ಜಿಪಿಂ ಸಿಇಓ ಭೇಟಿ ನೀಡಿದ್ದಾರೆ.




