ಕಠ್ಮಂಡು: ನೇಪಾಳ ಭೂಸುನಾಮಿಗೆ ತತ್ತರಿಸಿದ್ದು, ಆದರೆ ವೈರಲ್ ವಿಡಿಯೋವೊಂದರಲ್ಲಿ ಹಸುರು ಬಣ್ಣದ ಅದೊಂದು ಮನೆ ಮಾತ್ರ ನಾಶವಾಗದೆ ತನ್ನನ್ನು ಹಾಗೂ ತನ್ನಲ್ಲಿ ಆಶ್ರಯ ಪಡೆದಿದ್ದವರನ್ನು ಕಾಪಾಡಿಕೊಂಡಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಮನೆಯ ಉಳಿವಿಗೆ ಏನು ಕಾರಣವಿರಬಹುದು ಎನ್ನುವುದನ್ನು ವಾಸ್ತುವಿನ್ಯಾಸ ತಜ್ಞರು ಹೇಳಿದ್ದಾರೆ.
ಹಿಮಾಲಯನ್ ಕಣಿವೆಗಳಲ್ಲಿ ಹೆಚ್ಚಿನ ಮನೆಗಳನ್ನು ಗಾರೆ ಇಲ್ಲದ ಕಲ್ಲಿನಿಂದ ನಿರ್ಮಿಸಲಾಗುತ್ತದೆ. ಇವು ಮೇಲಿಂದ ಬರುವ ಭಾರ ತಡೆಯಬಲ್ಲದು. ಆದರೆ ಬದಿಯಲ್ಲಿ ಒತ್ತಡ ಬಂದಾಗ ಕುಸಿಯುತ್ತದೆ. ಈ ಹಸಿರು ಮನೆಯನ್ನು ಕಾಪಾಡಿದ್ದು ಪಿಲ್ಲರ್‌ಗಳು, ಕಾಂಕ್ರೀಟ್ ಮತ್ತು ಉಕ್ಕಿನ ರಾಡ್‌ಗಳಿಂದ ನಿರ್ಮಿಸಲಾಗಿರುವ ಕಾಲಂಗಳು ಹಾಗು ಬೀಮ್‌ಗಳು, ಪ್ರವಾಹದಿಂದ ಮನೆಯ ಹೊರಗೋಡೆಗಳ ಮೇಲೆ ಬಿದ್ದ ಒತ್ತಡವನ್ನು ಅಡಿಪಾಯಕ್ಕೆ ರವಾನಿಸಿದ್ದರಿಂದ ಕಟ್ಟಡಕ್ಕೆ ಹಾನಿಯಾಗಿಲ್ಲ.
ಪ್ರವಾಹದ ಅಂಚಿನಲ್ಲಿ ಮೊದಲು ಬಂದ ದೊಡ್ಡಮಟ್ಟದ ಕೆಸರು, ಈ ಮನೆಯ ಸುತ್ತಲೂ ಒಂದು ರ್ಯಾಂಪ್ ರಚಿಸಿದ್ದರಿಂದ ಅನಂತರ ನುಗ್ಗಿಬಂದ ನೀರು ಕವಲೊಡೆದು ಮನೆಯನ್ನು ಬಳಸಿಕೊಂಡು ಹೋಗಿದೆ. ಈ ಕಾರಣದಿಂದ ಮನೆ ಉಳಿದಿದೆ ಎಂದು ಹೇಳಿದ್ದಾರೆ.



