ಹೊನ್ನಾವರ: ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ತುಂಡಾದ ತೂಗು ಸೇತುವೆ
ಹೊನ್ನಾವರ: ಸಿನಿಮಾ ಶೂಟಿಂಗ್ ನ ಕ್ಯಾಮರಾ ಟ್ರಾಲಿಯನ್ನು ತೂಗು ಸೇತುವೆ ಮೇಲೆ ತಂದ ಪರಿಣಾಮ ಸೇತುವೆ ತುಂಡಾಗಿ ಬಿದ್ದ ಘಟನೆ ತಾಲೂಕಿನ ಖರ್ವಾ ಗ್ರಾಮದ ನಾಥ ಗೇರಿ-ಮೂಟೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಬುಧವಾರ (ಅ.7) ನಡೆದಿದೆ.
Sponsoredಆಂಧ್ರದ ಆರ್ ಕೆ ದುಗ್ಗಲ್ ಸ್ಟುಡಿಯೋಸ್ ತಂಡವು ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಮೋಟೆ ತೂಗು ಸೇತುವೆ ಮೇಲೆ ಭಾರೀ ತೂಕದ ಚಿತ್ರೀಕರಣ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದು. ಈ ವೇಳೆ ಏಕಾಏಕಿ ಸೇತುವೆ ಒಂದು ಬದಿಯ ಕಬ್ಬಿಣದ ಹಗ್ಗ ತುಂಡಾಗಿ ಸೇತುವೆ ಪಕ್ಕಕ್ಕೆ ವಾಲಿ, ಸಮೀಪದ ತೆಂಗಿನ ಮರಕ್ಕೆ ಸೇತುವೆ ಒಗಿದ್ದರಿಂದ ಪೂರ್ಣ ಪ್ರಮಾಣದಲ್ಲಿ ನದಿಗೆ ಉರುಳುವುದು ತಪ್ಪಿದೆ.
ಇದರಿಂದ ಸೇತುವೆ ಮೇಲಿದ್ದ ಚಿತ್ರತಂಡದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.




