ಯವತಿಯೊಬ್ಬಳು ಗೆಳೆಯನ ಜೊತೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ ಘಟನೆ ಹೈದರಾಬಾದ್‌ನ ಖಾಸಗಿ ಹೊಟೆಲ್‌ನಲ್ಲಿ ನಡೆದಿದೆ.
26ರ ಹರೆಯದ ಕ್ಲಬ್ ಡ್ಯಾನ್ಸರ್ ರೇಣುಕಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ಖಾಸಗಿ ಹೊಟೆಲ್ ನಲ್ಲಿ ಗೆಳೆಯ ಫಾರುಖ್ ಜೊತೆ ರೇಣುಕಾ ಹೊಟೆಲ್ ರೂಂನಲ್ಲಿ ತಂಗಿದ್ದು, ಬಳಿಕ ಫಾರುಖ್ ಹೊರಗಡೆ ಹೋದಾಗ ವಿಡಿಯೋ ಕಾಲ್ ಮಾಡಿ ದುರಂತ ಅಂತ್ಯ ಕಂಡಿದ್ದಾಳೆ.
ಹೈದರಾಬಾದ್‌ನ ಬೊಲರಾಂ ನಿವಾಸಿಯಾಗಿರುವ ರೇಣುಕಾ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಕೆಗೆ ಒಬ್ಬ ಮಗನಿದ್ದಾನೆ. ಆದರೆ ಗಂಡನಿಂದ ದೂರವಾಗಿರುವ ರೇಣುಕಾ ಕಳೆದ 6 ತಿಂಗಳಿನಿಂದ ಫಾರೂಖ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದಳು. ಇವರಿಬ್ಬರ ರಿಲೇಶನ್‌ಶಿಪ್ ಬೆಡ್ ರೂಂಗೆ ತಲುಪಿತ್ತು. ಹೀಗೆ ಹೈದರಾಬಾದ್‌ನ ಹೊಟೆಲ್‌ನಲ್ಲಿ ರೂಂ ಪಡೆದ ಈ ಜೋಡಿ ಇಬ್ಬರು ಚೆಕ್ ಇನ್ ಆಗಿದ್ದಾರೆ. ಇಬ್ಬರು ಜೊತೆಯಾಗಿಯೇ ಕೆಲ ಹೊತ್ತು ಹೊಟೆಲ್ ರೂಂನಲ್ಲಿ ಕಳೆದಿದ್ದಾರೆ.
ಬಳಿಕ ರಾತ್ರಿ ವೇಳೆ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಇಬ್ಬರು ಬಿರಿಯಾನಿ ತಿಂದಿದ್ದಾರೆ. ಊಟದ ಬಳಿಕ ಫಾರೂಖ್ ತನಗೆ ಒಂದು ಕಾರ್ಯಕ್ರಮವಿದೆ ಎಂದು ತೆರಳಿದ್ದಾನೆ. ಫೂರೂಖ್ ಕಾರ್ಯಕ್ರಮಕ್ಕಾಗಿ ಹೊರಗೆ ತೆರಳಿದ ಬಳಿಕ ಕೋಣೆಯಲ್ಲಿ ಒಬ್ಬಳೇ ಇದ್ದ ರೇಣುಕಾ ಕೆಲ ಹೊತ್ತಲ್ಲಿ ಕರೆ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿದ ರೇಣುಕಾ ಇದು ನಿನಗೆ ಬರ್ತಡೆ ಗಿಫ್ಟ್ ಎನ್ನುತ್ತಾ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ್ದಾಳೆ.
ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



