ಶನಿವಾರ, 24 ಅಕ್ಟೋಬರ್ 2026

High Court : ತುಟಿ ಕಚ್ಚಿದ ಕೇಸ್ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ – ನ್ಯಾಯಾಧೀಶರಿಂದ ಸ್ವಾರಸ್ಯಕರ ಪ್ರಶ್ನೆ

High Court : ಕೆಲವೊಮ್ಮೆ ಕೋರ್ಟ್ ಗಳಲ್ಲಿ ಬಲು ಅಪರೂಪದ ಹಾಗೂ ವಿಶೇಷ ರೀತಿಯ ಪ್ರಕರಣಗಳು ವಿಚಾರಣೆಗೆ ಬರುತ್ತದೆ. ಇನ್ನು ಕೆಲವೊಮ್ಮೆ ಎಂದು ಚಿತ್ರ ವಿಚಿತ್ರವಾದ ಪ್ರಕರಣಗಳನ್ನು ನಾವು ಕೋರ್ಟ್ ಅಂಗಳದಲ್ಲಿ ಕಾಣಬಹುದು. ಇದೀಗ ಅಂತದ್ದೇ ಒಂದು ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆಯಾಗಿದೆ.

ಯಸ್, ಕರ್ನಾಟಕ ಹೈಕೋರ್ಟ್ ನಲ್ಲಿ ಗಂಡ ಹೆಂಡತಿ ಇಬ್ಬರು ಹೊಡೆದಾಡಿಕೊಂಡು ತುಟಿ ಕಚ್ಚಿದ ವಿಚಿತ್ರ ಪ್ರಕರಣವೊಂದರ ವಿಚಾರಣೆ ನಡೆದಿದೆ. ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಲಾಯರ್ ನಡುವಿನ ಸಂಭಾಷಣೆ ಈಗ ವೈರಲ್ ಆಗಿದೆ. 

ವಕೀಲರು ಪ್ರಕರಣದ ವಿವರಣೆಯನ್ನು ನ್ಯಾಯಾಧೀಶರ ಮುಂದಿಡುತ್ತಿದ್ದರು. ಈ ವೇಳೆ ಪ್ರಕರಣದ ವಿವರಣೆಯನ್ನು ಬಹಳ ಗಂಭೀರವಾಗಿ ಓದುತ್ತಿದ್ದ ನ್ಯಾಯಾಧೀಶರಿಗೆ ಸಡನ್ ಆಗಿ ಒಂದು ಅನುಮಾನ ಬರುತ್ತದೆ. ಆಗ ಅವರು ‘ನನಗೆ ಒಂದು ಡೌಟು, ನೀವ್ಯಾಕೆ ದೂರುದಾರರ ತುಟಿ ಕಚ್ಚಲು ಹೋದಿರಿ’ ಎಂದು ಕೇಳುತ್ತಾರೆ.  ಗಂಭೀರವಾಗಿದ್ದ ಕೋರ್ಟ್ ಈ ಒಂದು ಪ್ರಶ್ನೆಯಿಂದ ಕಿಲಕಿಲನೆ ನಗಲು ಶುರುವಾಗುತ್ತದೆ. ಈ ವೇಳೆ ವಕೀಲರಿಗೂ ನಗುವೋ ನಗು.

ಅತ್ತ ನ್ಯಾಯಾಧೀಶರೂ ಇದನ್ನು ತಮಾಷೆಯಾಗಿ ಪ್ರಶ್ನೆ ಮಾಡಿರುತ್ತಾರೆ. ಬಳಿಕ ಪ್ರಕರಣದ ಕುರಿತಾದ ತೀರ್ಪನ್ನು ನ್ಯಾಯಾಧೀಶರು ಹೇಳುತ್ತಾರೆ. ಆದರೆ ಯಾವ ರೀತಿ ತೀರ್ಪನ್ನು ನೀಡುತ್ತಾರೆ ಎಂಬುದು ವಿಡಿಯೋದಲ್ಲಿ ತೋರಿಸಲಾಗಿಲ್ಲ. ನೋಡುಗರಿಗೆಲ್ಲರಿಗೂ ಈ ವಿಚಾರಣೆಯ ತೀರ್ಪು ಹೇಗಿರಬಹುದು ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ಕಮೆಂಟ್ಗಳನ್ನು ಕೂಡ ಮಾಡಲಾಗುತ್ತಿದೆ.

ಇಲ್ಲಿದೆ ವಿಡಿಯೋ 👇

https://x.com/i/status/2026719119610159289