ಶನಿವಾರ, 24 ಅಕ್ಟೋಬರ್ 2026

ಸೊಸೆ ಮೇಲೆ ಕೋಪ – 2 ತಿಂಗಳ ಹಸುಗೂಸ ಕಾಲು ಮುರಿದ ಅತ್ತೆ!!

ಅತ್ತೆ ಒಬ್ಬಳು ತನ್ನ ಸೊಸೆಯ ಮೇಲಿನ ಕೋಪವನ್ನು ತೀರಿಸಲು 2 ತಿಂಗಳ ಹಸುಗೂಸೊಂದನ್ನು ಬಲಿಪಶು ಮಾಡಲು ಹೋಗಿ ರಾಕ್ಷಸಿ ಕೃತ್ಯ ಎಸಗಿರುವ ಶೋಚನೀಯ ಘಟನೆಯೊಂದು ನಡೆದಿದೆ.

ಮಗುವಿನ ತಾಯಿ ತನ್ನ 2 ತಿಂಗಳ ಮಗುವನ್ನು ಅತ್ತೆಯ ಬಳಿ ಬಿಟ್ಟು ಹೋದಾಗಲೆಲ್ಲಾ ಮಗು ತಡೆಯಲಾಗದಷ್ಟು ಜೋರಾಗಿ ಅಳುತ್ತಿತ್ತು. ಮಗುವಿನ ಈ ವಿಚಿತ್ರ ಅಳುವಿನಿಂದ ಅನುಮಾನಗೊಂಡ ತಾಯಿ, ಮನೆಯಲ್ಲಿ ಯಾರಿಗೂ ತಿಳಿಯದಂತೆ CC ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅತ್ತೆಯ ಅಸಲಿ ಬಣ್ಣ ಹಾಗೂ ಅಮಾನವೀಯ ಕೃತ್ಯ ಬಯಲಾಗಿದೆ.

ಕುಟುಂಬದ ವೈಷಮ್ಯವನ್ನು, ತನ್ನ ಮೇಲಿನ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡ ಅತ್ತೆ ಹಸುಗೂಸಿನ ಮೇಲೆ ದೌರ್ಜನ್ಯ ಎಸಗಿ, ಕಾಲನ್ನು ಮುರಿದಿರುವ ದೃಶ್ಯ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಬಳಿಕ ಅವರು ತನ್ನ ಅತ್ತೆಯ ವಿರುದ್ಧ ದೂರು ನೀಡಿದ್ದಾರೆ.

ಆರೋಪಿ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ನಿಷ್ಕಪಟ ಹಸುಗೂಸಿನ ಮೇಲೆ ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಹೋದ ಈ ಮಹಿಳೆಯ ಕೃತ್ಯ ಸಮಾಜದ ಮಾನವೀಯತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಆದರೆ ಇದು ಎಲ್ಲಿ, ಯಾವಾಗ ನಡೆದದ್ದು ಎಂದು ವಾರದಿಯಾಗಿಲ್ಲ.