ಸೋಮವಾರ, 26 ಅಕ್ಟೋಬರ್ 2026
Trending

ಕೊರೊನಾ ಬಳಿಕ ʼಹಂಟಾವೈರಸ್‌ʼ ಪತ್ತೆ, ಪ್ರಕರಣ ದಾಖಲು

ಕೊರೊನಾ ಮಹಾಮರಿಯ ನೆನಪುಗಳು ಇನ್ನೂ ಮಾಸಿಲ್ಲ. ಇದರ ಜೊತೆಗೆ ಇದೀಗ ʼಹಂಟಾವೈರಸ್‌ʼ ಸೋಂಕೊಂದು‌ ಸ್ವಿಟ್ಸರ್ಲೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಸ್ವಿಸ್‌ ಅಧಿಕಾರಿಗಳು, ಹಂಟಾವೈರಸ್‌ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ.

Sponsored

ಈ ಸೋಂಕು MV Hondius ಎಂಬ ಪ್ರವಾಸಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಲ್ಲಿ ಪತ್ತೆಯಾಗಿದ್ದು, ಸದ್ಯ ಅವರಿಗೆ ಜ್ಯೂರಿಕ್‌ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
Advertisement

ಕಳೆದ ಎಪ್ರಿಲ್‌ 1 ರಂದು ಅರ್ಜೈಂಟೀನಾ ನಿಂದ ಸುಮಾರು 147 ಪ್ರಯಾಣಿಕರ ಜೊತೆಗೆ ಹೊರಟಿದ್ದ ಈ ಹಡಗಿನಲ್ಲಿ ಈ ಸೋಂಕಿನ ಹರಡುವಿಕೆ ಆರಂಭವಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಮೂವರು ಪ್ರಯಾಣಿಕರು ಸಾವಿಗೀಡಾಗಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಹಂಟಾವೈರಸ್‌ ಒಂದು ʼಜೂನೋಟಿಕ್‌ʼ ವೈರಸ್‌ ಆಗಿದ್ದು, ಸಾಮಾನ್ಯವಾಗಿ ಕಾಡು ಇಲಿಗಳು ಹಾಗೂ ಹೆಗ್ಗಣಗಳ ಲಾಲಾರಸ, ಮೂತ್ರ ಅಥವಾ ಮಲದ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ. ಸಾಮಾನ್ಯ ಹಂಟಾವೈರಸ್‌ಗಳು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಈ ಘಟನೆಯಲ್ಲಿ ಪತ್ತೆಯಾಗಿರುವ Andes virus infection ಮಾತ್ರ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವೈರಸ್‌ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರಬಹುದು ಹಾಗೂ ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಾರ್ವಜನಿಕರಿಗೆ ದೊಡ್ಡ ಮಟ್ಟದ ಅಪಾಯವಿಲ್ಲ ಎಂದು ಸ್ವಿಸ್‌ ಸರಕಾರ ಹಾಗೂ WHO ಭರವಸೆ ನೀಡಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಕಕ್ಕೆ ಬಂದವರನ್ನು ಪತ್ತೆಹಚ್ಚುವ ʼಕಾಂಟ್ಯಾಕ್ಟ್‌ ಟ್ರೇಸಿಂಗ್‌ʼ ಕಾರ್ಯ ನಡೆಯುತ್ತಿದೆ. ಸೌತ್‌ ಆಫ್ರಿಕಾ, ಅರ್ಜೇಂಟೀನಾ ಮತ್ತು ಸ್ವಿಜರ್ಲೆಂಡ್‌ನ ಪ್ರಯೋಗಾಲಯಗಳು ಜಂಟಿಯಾಗಿ ವೈರಸ್‌ನ ಮೂಲ ಹಾಗೂ ಹರಡುವಿಕೆ ಕುರಿತು ಅಧ್ಯಯನ ನಡೆಯುತ್ತಿದೆ.

Advertisement