ಗುರುವಾಯನಕೆರೆ: ಬದಲಾವಣೆ ಕಾಲದ ಗುಣ. ಆ ಬದಲಾವಣೆಗೆ ತಕ್ಕ ಹಾಗೆ ನಾವು ಬೆಳೆಯಬೇಕಾಗಿದೆ. ಇಲ್ಲದಿದ್ದರೆ ನಾವು ಔಟ್ ಡೇಟೆಡ್ ಆಗಿ ಬಿಡುತ್ತೇವೆ. ಹೊಸಕಾಲದ ಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿ ಬೇಕಾಗುತ್ತದೆ. ಸ್ಪರ್ಧಾತ್ಮಕ ಕಾಲಕ್ಕೆ ಬೇಕಾದ ಜ್ಞಾನ ಎಕ್ಸೆಲ್ ನಲ್ಲಿ ದೊರಕುತ್ತದೆ.ಭಾರತ ದೇಶ 80ನೇ ಸ್ವಾತಂತ್ರ್ಯ ದಿನವನ್ನು ಹೆಮ್ಮೆಯಿಂದ ಆಚರಿಸಿಕೊಳ್ಳುತ್ತಿದೆ. ಎಕ್ಸೆಲ್ ಕಾಲೇಜಿಗೆ ಬಂದು ಸ್ವತಂತ್ರ್ಯ ದಿನವನ್ನು ಸಂಭ್ರಮಿಸಿದ್ದು ಅವಿಸ್ಮರಣೀಯ ದಿನ. ಈ ದಿನ ತನ್ನ ಶಾಲಾ ಜೀವನವನ್ನು ನೆನಪಿಸುತ್ತದೆ ಎಂದು ಭಾರತೀಯ ಸೇನೆಯ ಪೂರ್ವ ವೈದ್ಯ ಹಾಗೂ ಪ್ರಸ್ತುತ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ಡಾ. ಕುಶ್ವಂತ್ ಕೆ ಎನ್ ಹೇಳಿದರು.
ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಎಕ್ಸೆಲ್ ಪಿ ಯು ಕಾಲೇಜು ಅರಮಲೆಬೆಟ್ಟದ ಆವರಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣಗೈದು ಸಭೆಯನ್ನುದ್ದೇಶಿ ಮಾತನಾಡಿದರು. ಎಕ್ಸೆಲ್ ಸಂಸ್ಥೆಯು ಬೆಳೆದು ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭಹಾರೈಸಿದರು.
ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಎಕ್ಸೆಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಜ್ವಲ್ ಕಜೆ, ಡಾ. ನವೀನ್ ಕುಮಾರ್ ಮರಿಕೆ, ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಪ್ರಾಂಶುಪಾಲೆ ಸುಮಿತ್ರಾ ಗೌಡ, ಎನ್‌ಡಿಎ ಸಂಯೋಜಕ ಜೋಸ್ಟಮ್ ಎ ಟಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಅರುಣ್ ಕ್ಯಾಸ್ಟಲೀನೊ, ಜೀವನ್ ಕಾರ್ಯಕ್ರಮ ನಿರೂಪಿಸಿದರು. ಎಕ್ಸೆಲ್ ಪಿಯು ಕಾಲೇಜು ಹಾಗೂ ಟೆಕ್ನೋ ಸ್ಕೂಲ್‌ನ ಶಿಕ್ಷಕ ಶಿಕ್ಷಕೇತರ ವೃಂದ, ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.



