ಶನಿವಾರ, 24 ಅಕ್ಟೋಬರ್ 2026

ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ – ಆಗಸ್ಟ್​ ಕರೆಂಟ್ ಬಿಲ್‌ನಲ್ಲಿ ‘ಈ’ ಪದ ಇಲ್ಲಾ ಅಂದ್ರೆ ಸೆಪ್ಟೆಂಬರ್‌ನಿಂದ ಫ್ರೀ ಕರೆಂಟ್ ಕಟ್!!

‘ಗೃಹಜ್ಯೋತಿ’ ಅಡಿಯಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್  ಪಡೆಯುತ್ತಿರುವ ಕೋಟ್ಯಂತರ ಫಲಾನುಭವಿಗಳಿಗೆ ಇದೀಗ ದೊಡ್ಡದೊಂದು ಅಪ್ಡೇಟ್ ಬಂದಿದೆ. ತಕ್ಷಣವೇ ನಿಮ್ಮ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಅನ್ನು ಪರಿಶೀಲಿಸಿ. ಯಾಕೆಂದರೆ ಆ ಬಿಲ್ ನಲ್ಲಿ ಮುದ್ರಿತವಾಗಿರುವ ಒಂದು ಪದ ನೀವು ಇನ್ನುಮುಂದೆಯೂ ಉಚಿತ ಕರೆಂಟ್ ಪಡೆಯಲು ಅರ್ಹರಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.

ಬಿಲ್‌ನ ಮೇಲ್ಭಾಗದಲ್ಲಿ, ಗ್ರಾಹಕರ ವಿವರ ಇರುವ ಜಾಗದಲ್ಲಿ ‘ಜಿಜೆ ಸರ್ವೆಡ್’ (GJ Surveyed) ಅಥವಾ ‘ಗೃಹಜ್ಯೋತಿ ಸರ್ವೆಡ್’ ಎಂದು ಮುದ್ರಿತವಾಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಈ ರೀತಿ ಬಂದಿಲ್ಲವೆಂದರೆ ನೀವು ತುರ್ತಾಗಿ ಮಾಡಬೇಕಾದ ಕೆಲಸಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

‘ಜಿಜೆ ಸರ್ವೆಡ್’ ಎಂದರೆ ಏನು?

ಬೆಸ್ಕಾಂ ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡಿ, ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ, ಆ ಮಾಹಿತಿಯನ್ನು ಬೆಸ್ಕಾಂ ಸರ್ವರ್‌ನಲ್ಲಿ ಯಶಸ್ವಿಯಾಗಿ ಅಪ್ಡೇಟ್ ಮಾಡಿದ್ದಾರೆ ಎಂದರ್ಥ. ಆದರೆ, ಕೇವಲ ದಾಖಲೆ ನೀಡಿದ ತಕ್ಷಣ ಈ ಪ್ರಿಂಟ್ ಬರುವುದಿಲ್ಲ. ಜುಲೈ ತಿಂಗಳಲ್ಲಿ ದಾಖಲೆ ನೀಡಿದ್ದರೆ, ಆಗಸ್ಟ್ ಬಿಲ್‌ನಲ್ಲಿ ರಿಫ್ಲೆಕ್ಟ್ ಆಗುತ್ತದೆ. ಒಂದು ವೇಳೆ ನೀವು ಆಗಸ್ಟ್ ಆರಂಭದಲ್ಲಿ ದಾಖಲೆ ನೀಡಿದ್ದರೆ, ಸೈಕಲ್ ಲ್ಯಾಗ್‌ನಿಂದಾಗಿ ಅದು ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 

ಬಾಡಿಗೆದಾರರಿಗೆ ಸಮಾಧಾನಕರ ಸುದ್ದಿ!

ನೀವು ಬಾಡಿಗೆದಾರರಾಗಿದ್ದರೆ ಮತ್ತು ವಿದ್ಯುತ್ ಮೀಟರ್ ಮಾಲೀಕರ ಹೆಸರಿನಲ್ಲಿದ್ದರೂ ಆತಂಕಪಡುವ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿ ಪರಿಶೀಲನೆಗೆ ಬಂದಾಗ, ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ರೆಂಟಲ್ ಅಗ್ರಿಮೆಂಟ್ (Rental Agreement) ಒದಗಿಸಿದರೆ ಸಾಕು, ನಿಮ್ಮ ಉಚಿತ ವಿದ್ಯುತ್ ಸೌಲಭ್ಯ ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯುತ್ತದೆ.