ಸೋಮವಾರ, 26 ಅಕ್ಟೋಬರ್ 2026
Trending

Governor : SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರಿಂದ ಅಂಕಿತ !!

Governor : ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಗಲಾಟೆ-ಗದ್ದಲಗಳ ನಡುವೆ, ಚರ್ಚೆ ಇಲ್ಲದೆ ರಾಜ್ಯ ಸರ್ಕಾರವು ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕ’ಕ್ಕೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

Sponsored

ಈ ಹಿಂದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಸಚಿವರ ನಿಯೋಗ ಭೇಟಿಯಾಗಿ ಅಂಕಿತ ಹಾಕುವಂತೆ ಮನವಿ ಮಾಡಿತ್ತು. ಹೀಗಾಗಿ ಕರ್ನಾಟಕದ (Karnataka) ಬಹು ನಿರೀಕ್ಷಿತ ಎಸ್ಸಿ ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು (Governor) ಅಂಕಿತ ಹಾಕಿದ್ದಾರೆ. 

Advertisement

ಯಾರಿಗೆಎಷ್ಟುಮೀಸಲಾತಿ?

ಎಡಗೈಗೆ 6%, ಬಲಗೈಗೆ 6%, ಲಂಬಾಣಿ, ಭೋವಿ ಕೊರಚ ಕೊರಮ, ಅಲೆಮಾರಿ ಸೇರಿದಂತೆ ಇತರೆ ಉಪಪಂಗಡಗಳಿಗೆ 5% ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈ ಹಿಂದೆ ಎಡಗೈಗೆ 6%, ಬಲಗೈಗೆ 5%, ಲಂಬಾಣಿ ಭೋವಿ ಸಮುದಾಯಕ್ಕೆ 4%, ಅಲೆಮಾರಿಗಳಿಗೆ 1%, ಆದಿ ಕರ್ನಾಟಕ, ಅದಿ ದ್ರಾವಿಡ ಸಮುದಾಯಗಳಿಗೆ 1% ಮೀಸಲಾತಿಗೆ ನಾಗಮೋಹನ್ ದಾಸ್ ಆಯೋಗ ಶಿಫಾರಸ್ಸು ಮಾಡಿತ್ತು.