ಸೋಮವಾರ, 26 ಅಕ್ಟೋಬರ್ 2026
Trending

ಕೊರಗ ಮಲೆಕುಡಿಯರಿಗೆ ಸ್ಥಗಿತಗೊಂಡಿದ್ದ ಪೌಷ್ಠಿಕ ಆಹಾರ ಕಿಟ್ ವಿತರಣೆಗೆ ಸರ್ಕಾರದ ಆದೇಶ

Rakshith Shivaram

ಬೆಳ್ತಂಗಡಿ: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ITDP) ಅಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮೂಲನಿವಾಸಿ (PVTG) ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸ್ಥಗಿತಗೊಂಡಿದ್ದ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆಯನ್ನು ಪುನಾರಂಭಿಸುವಂತೆ KPCC ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸಲ್ಲಿಸಿದ್ದ ಮನವಿಗೆ ಸರ್ಕಾರ ತಕ್ಷಣವೇ ಸ್ಪಂದಿಸಿದ್ದು, ಆಹಾರ ಕಿಟ್ ಸರಬರಾಜಿಗೆ ಅಧಿಕೃತ ಆದೇಶ ಹೊರಡಿಸಿದೆ.

Sponsored

ಪ್ರಕರಣದ ಹಿನ್ನೆಲೆ:
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ವಾಸಿಸುತ್ತಿರುವ ಕೊರಗ, ಮಲೆಕುಡಿಯ, ಜೇನುಕುರುಬ, ಕಾಡುಕುರುಬ ಸೇರಿದಂತೆ ಅಳಿವಿನಂಚಿನಲ್ಲಿರುವ ಮೂಲನಿವಾಸಿ ಸಮುದಾಯಗಳಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ಕಿಟ್‌ಗಳ ಪೂರೈಕೆ ಕಳೆದ ಸುಮಾರು 8 ತಿಂಗಳಿಂದ ಸ್ಥಗಿತಗೊಂಡಿತ್ತು. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ 3,015 ಕುಟುಂಬಗಳು ಹಾಗೂ ಉಡುಪಿ ಜಿಲ್ಲೆಯ 3,120 ಕುಟುಂಬಗಳು ಸೇರಿದಂತೆ ಉಭಯ ಜಿಲ್ಲೆಗಳ 6,000ಕ್ಕೂ ಹೆಚ್ಚು ಕುಟುಂಬಗಳು ಮತ್ತು ರಾಜ್ಯದ ಸಾವಿರಾರು ಮೂಲನಿವಾಸಿ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು.
ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಉದ್ಯೋಗ ಹಾಗೂ ಆದಾಯದ ಕೊರತೆಯಿಂದ ಬಳಲುತ್ತಿದ್ದ ಈ ಕುಟುಂಬಗಳಿಗೆ ಪೌಷ್ಟಿಕ ಆಹಾರ ದೊರೆಯದೆ ಆರೋಗ್ಯ ಸಮಸ್ಯೆ ಎದುರಾಗುವ ಭೀತಿ ಎದುರಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ KPCC ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾದ ಟಿ. ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿ, ಟೆಂಡರ್ ಪ್ರಕ್ರಿಯೆಯ ಕಾರಣದಿಂದ ಯೋಜನೆ ಸ್ಥಗಿತಗೊಳ್ಳಬಾರದು ಮತ್ತು ತಕ್ಷಣವೇ ಆಹಾರ ಕಿಟ್‌ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದ್ದರು.

Advertisement
Advertisement

ಸರ್ಕಾರದ ಸ್ಪಂದನೆ ಮತ್ತು ಅಧಿಕೃತ ಆದೇಶ (ದಿನಾಂಕ: 01.10.2026):
ಮೂಲನಿವಾಸಿಗಳ ಸ್ಥಿತಿಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರವು ಆದೇಶ ಸಂಖ್ಯೆ: ಪವಕನಿ:ಪವಂಉಯೋ:ಸಿಆರ್-02:2025-26, ದಿನಾಂಕ: 01.10.2026 ರಂತೆ ಪೌಷ್ಟಿಕ ಆಹಾರ ಕಿಟ್ ವಿತರಣೆಗೆ ಅನುಮೋದನೆ ನೀಡಿ ಕಾರ್ಯಾದೇಶ ಹೊರಡಿಸಿದೆ.

ಆದೇಶದ ಪ್ರಮುಖ ಮುಖ್ಯಾಂಶಗಳು:ಫಲಾನುಭವಿಗಳ ವಿವರ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಸೇರಿದಂತೆ 09 ಜಿಲ್ಲೆಗಳ ಅರಣ್ಯ ಹಾಗೂ ಅರಣ್ಯ ಅಂಚಿನಲ್ಲಿ ವಾಸಿಸುವ ಕೊರಗ, ಜೇನುಕುರುಬ, ಕಾಡುಕುರುಬ, ಸೋಲಿಗ, ಯರcombination/ಯರವ, ಮಲೆಕುಡಿ, ಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ, ಬೆಟ್ಟಕುರುಬ, ಇರುಳಿಗ ಮತ್ತು ಹಕ್ಕಿಪಿಕ್ಕಿ ಜನಾಂಗದ ಒಟ್ಟು 52,678 ಕುಟುಂಬಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್‌ಗಳನ್ನು ಸರ್ಕಾರ ಪೂರೈಸಲಿದೆ.

ಟೆಂಡರ್ ಮೊತ್ತ: ಒಟ್ಟು ರೂ. 144.41 ಕೋಟಿಗಳ ಮಿತಿಯಲ್ಲಿ 12 ತಿಂಗಳುಗಳ ಅವಧಿಗೆ ಆಹಾರ ಕಿಟ್‌ಗಳನ್ನು ಸರಬರಾಜು ಮಾಡಲು M/S N.C.C.F of India Limited (L-1 ಬಿಡ್‌ದಾರರು) ಅವರಿಗೆ ಕಾರ್ಯಾದೇಶ ನೀಡಲಾಗಿದೆ.
* ಒಂದು ಕಿಟ್‌ನ ಮೌಲ್ಯ: ಪ್ರತಿ ಕುಟುಂಬಕ್ಕೆ ನೀಡಲಾಗುವ ಪೌಷ್ಟಿಕ ಆಹಾರ ಕಿಟ್‌ನ ಒಟ್ಟು ಮೌಲ್ಯ ರೂ. 2,284.50/- ಆಗಿದೆ.

Advertisement