ಭಾನುವಾರ, 25 ಅಕ್ಟೋಬರ್ 2026
Trending

Jio : ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ – ಹೊಸ ಫ್ಯಾಮಿಲಿ ಪ್ಲಾನ್ ಪರಿಚಯಿಸಿದ ಕಂಪನಿ!!

Jio: ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿರುವ ಜಿಯೋ ಸಂಸ್ಥೆಯು ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಹೊಸ ಫ್ಯಾಮಿಲಿ ಪ್ಲಾನ್

Jio: ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿರುವ ಜಿಯೋ ಸಂಸ್ಥೆಯು ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಹೊಸ ಫ್ಯಾಮಿಲಿ ಪ್ಲಾನ್ ಪರಿಚಯಿಸಿದೆ.

Sponsored

ಹೌದು, ಜಿಯೋ ಸಂಸ್ಥೆಯು ಕೇವಲ 449 ರೂಪಾಯಿಗಳಲ್ಲಿ ಮೂರು ಮೊಬೈಲ್​ ನಂಬರ್​ಗಳನ್ನು ಬಳಸಲು ಅವಕಾಶ ಕಲ್ಪಿಸಿದೆ. ಇದರ ಅರ್ಥ ಒಂದೇ ರಿಚಾರ್ಜ್‌ನಲ್ಲಿ 3 ನಂಬರ್ ಬಳಸಲು ಅವಕಾಶ ಇವೆ. ತಿಂಗಳು ಪೂರ್ತಿ ಅನಿಯಮಿತ ಕರೆ ಸೌಲಭ್ಯವನ್ನೂ ಇದರಲ್ಲಿ ಪಡೆಯಬಹುದು.

ಯಾವುದಿದು ಹೊಸ ಪ್ಲಾನ್?

ನೀವು ಅಥವಾ ನಿಮ್ಮ ಫ್ಯಾಮಿಲಿಯಲ್ಲಿ ಮೂವರು ಜಿಯೋ ಬಳಸುತ್ತಿದ್ದೀರಿ ಎಂದಾದರೆ ಇದರ ಲಾಭವನ್ನು ನೀವು ಪಡೆಯಬಹುದು. 449 ರೂಪಾಯಿಗೆ ಮೂರು ಮಂದಿ ಉಪಯೋಗಿಸಬಹುದು. ಇದು ಪೋಸ್ಟ್​ ಪೇಯ್ಡ್​ ಪ್ಲ್ಯಾನ್​ ಆಗಿದೆ (Post Paid plan). ಜಿಯೋದ ಈ ವಿಶೇಷ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಫ್ಯಾಮಿಲಿ ಆಡ್-ಆನ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರ ಅಡಿಯಲ್ಲಿ, ಒಬ್ಬ ಮುಖ್ಯ ಬಳಕೆದಾರರು ಇರುತ್ತಾರೆ. ಅವರು ಮೂವರು ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಮೊದಲಿಗೆ 449 ರೀಚಾರ್ಜ್​ ಮಾಡಿಸಬೇಕು. ಕೊನೆಗೆ ಮೂರು ಮಂದಿ ಸದಸ್ಯರನ್ನು ಆಯಡ್​ ಆನ್​ ಮಾಡಲು ಅವಕಾಶವಿದೆ. ಪ್ರತಿಯೊಬ್ಬರಿಗೂ 150 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಇಬ್ಬರನ್ನು ಆಯಡ್​ ಆನ್​ ಮಾಡಿದರೆ, ₹ 449 + ₹ 150 × 2 = ₹ 749 ರಲ್ಲಿ ಮೊಬೈಲ್ ಸೇವೆಯನ್ನು ಪಡೆಯಬಹುದು.

ರಿಲಯನ್ಸ್ ಜಿಯೋ ರೂ. 449 ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಒಂದು ತಿಂಗಳವರೆಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯು ಒಟ್ಟು 75 GB ಡೇಟಾ ಇದೆ. ಈ ಡೇಟಾ ಮುಗಿದ ನಂತರ ಪ್ರತಿ 1GB ಡೇಟಾ ಬಳಕೆಗೆ ರೂ. 10 ಶುಲ್ಕ ವಿಧಿಸಲಾಗುತ್ತದೆ. ಇದು ಹೆಚ್ಚುವರಿ ಫ್ಯಾಮಿಲಿ ಸದಸ್ಯರಿಗೆ 5GB ಹೆಚ್ಚುವರಿ ಡೇಟಾವನ್ನು ಸಹ ಒದಗಿಸುತ್ತದೆ.

ಇದನ್ನು ಪಡೆಯುವುದು ಹೇಗೆ?

ಈ ಜಿಯೋ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್​ಗೆ ಸೇರಲು ಮೊದಲಿಗೆ ನೀವು ಪ್ರೈಮರಿ ಎಂದು ಪರಿಗಣಿಸುವ ಒಂದು ನಂಬರ್​ ಅನ್ನು ಮೊದಲಿಗೆ ಪ್ರಿಪೇಯ್ಡ್ ನಿಂದ ಪೋಸ್ಟ್​ಪೇಯ್ಡ್​ಗೆ ಮೈಗ್ರೇಶನ್ ಮಾಡಿಕೊಳ್ಳಬೇಕಾಗುತ್ತದೆ. ಇದು ನಿಮಗೆ ಕಸ್ಟಮರ್ ಕೇರ್​ಗೆ ಕರೆ ಮಾಡುವ ಮೂಲಕ ಮಾಡಿಕೊಳ್ಳಬಹುದು. ಬಳಿಕ ಉಳಿದ ಎರಡು ಸಂಖ್ಯೆಯನ್ನು ಇದರಡಿಯಲ್ಲಿ ಸೇರಿಸಲಾಗುತ್ತದೆ. ಆದರೆ ಈ ಆಡ್-ಆನ್ ಸಂಖ್ಯೆಗಳಿಗೆ 150 ರೂಗಳ ಮಾಸಿಕ ಶುಲ್ಕ ಸಹ ನೀಡಬೇಕಾಗುತ್ತದೆ.