ಶನಿವಾರ, 24 ಅಕ್ಟೋಬರ್ 2026

Harassment: ಬೆಂಗಳೂರಿನ ನಡುರಸ್ತೆಯಲ್ಲೇ ವಿದ್ಯಾರ್ಥಿನಿಯ ಖಾಸಗಿ ಭಾಗ ಮುಟ್ಟಿ ವಿಕೃತಿ – ಕಾಮುಕ ಅರೆಸ್ಟ್

Harassment: ಹುಡಗಿಯರು, ಯುವತಿಯರು ಒಂಟಿಯಾಗಿ ಓಡಾಡಂತಾಗಿದೆ. ಅಂತೆಯೇ ಇದೀಗ ಬೆಂಗಳೂರು ನಗರದಲ್ಲಿ ಇದೀಗ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

Harassment

Harassment: ನಗರಗಳಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಪರೀತ ಆಗುತ್ತಿವೆ. ಕಾಮುಕರಿಗೆ ಎಷ್ಟೇ ಬುದ್ಧಿ ಕಲಿಸಿದರೂ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿದ್ದಾರೆ. ಹುಡಗಿಯರು, ಯುವತಿಯರು ಒಂಟಿಯಾಗಿ ಓಡಾಡಂತಾಗಿದೆ. ಅಂತೆಯೇ ಇದೀಗ ಬೆಂಗಳೂರು ನಗರದಲ್ಲಿ ಇದೀಗ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Kundapura: 5ನೇ ಮಹಡಿಯ ಫ್ಲ್ಯಾಟ್‌ನಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

ಹೌದು, ಬೆಂಗಳೂರು(Bengaluru) ನಗರದ ನಡು ರಸ್ತೆಯಲ್ಲಿ ಕಾಮುಕನೋರ್ವ ವಿದ್ಯಾರ್ಥಿನಿಯೋರ್ವಳನ್ನು ಹಿಂಬಾಲಿಸಿ ಬಂದು ಆಕೆಯ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಕಿರುಕುಳ(Harassment)ನೀಡಿದ ಘಟನೆ ನಡೆದಿದೆ. ಈ ಘಟನೆಯು ಸುರಾನ ಕಾಲೇಜು ಸಮೀಪದ ಚಾಯ್ ಪಾಯಿಂಟ್ ಬಳಿ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Gurupatwant Singh Pannun: 2014 ರಿಂದ 2022ರ ನಡುವೆ ಖಲಿಸ್ತಾನಿ ಗುಂಪುಗಳು ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರು. ನೀಡಿವೆ : ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್

ಅಂದಹಾಗೆ ಕಾಮುಕ ಕಿರುಕುಳ ನೀಡುತ್ತಿದ್ದಂತೆ ವಿದ್ಯಾರ್ಥಿನಿಯು ಸಹಾಯಕ್ಕೆ ಕೂಗಿದ್ದು, ಕೂಡಲೇ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಅಲ್ಲಿಗೆ ಧಾವಿಸಿ ಆ ಪಾಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದಡಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಜಯನಗರ ನಿವಾಸಿ ಸುರೇಶ್ (26) ಎಂದು ಗುರುತಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ