ಸೋಮವಾರ, 26 ಅಕ್ಟೋಬರ್ 2026
Trending

ಟೊಮೆಟೋ ಬೆಲೆ ಪಾತಾಳಕ್ಕೆ: ಬಂಪರ್ ಬೆಳೆ ಬೆಳೆದ ರೈತರಿಗೆ ಕೈಕೊಟ್ಟ ಮಾರುಕಟ್ಟೆ!

Image credit: India.com

ಗದಗ: ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಟೊಮೆಟೋ ಬೆಲೆ ಭಾರಿ ಕುಸಿತ ಕಂಡಿದ್ದು, ಉತ್ತಮ ಬೆಳೆ ಬಂದರೂ ರೈತರಿಗೆ ಕೈತುಂಬ ಹಣ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ವರದಿಯಲ್ಲೂ ಲಕ್ಷ್ಮೇಶ್ವರದ ರೈತ ಚನ್ನಬಸವನಗೌಡ ಅವರ ಸಂಕಷ್ಟ ಬೆಳಕಿಗೆ ಬಂದಿದೆ.

Sponsored

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಹೆಲ್ಪ್‌ಲೈನ್: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ಚನ್ನಬಸವನಗೌಡ ಅವರು ಅರ್ಧ ಎಕರೆ ಜಮೀನಿನಲ್ಲಿ ಸುಮಾರು ₹30 ಸಾವಿರದಿಂದ ₹40 ಸಾವಿರ ಖರ್ಚು ಮಾಡಿ ಟೊಮೆಟೋ ಬೆಳೆದಿದ್ದರು. ಉತ್ತಮ ಇಳುವರಿ ಬಂದ ಹಿನ್ನೆಲೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಮಾರುಕಟ್ಟೆಯಲ್ಲಿ ಸುಮಾರು 20 ಕೆ.ಜಿ. ತೂಕದ ಒಂದು ಬಾಕ್ಸ್ ಟೊಮೆಟೋಗೆ ಕೇವಲ ₹30ರಿಂದ ₹40 ದರ ಸಿಗುತ್ತಿದೆ.

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಹೆಲ್ಪ್‌ಲೈನ್: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ಬೆಳಗ್ಗೆ 10ರಿಂದ 15 ಬಾಕ್ಸ್ ಟೊಮೆಟೋಗಳನ್ನು ಮಾರುಕಟ್ಟೆಗೆ ತಂದರೂ ಖರೀದಿದಾರರು ಸಿಗದೆ, ಸಾರಿಗೆ ವೆಚ್ಚವನ್ನೂ ಭರಿಸಿ ಬೆಳೆಯನ್ನು ವಾಪಸ್ ಕೊಂಡೊಯ್ಯಬೇಕಾದ ಪರಿಸ್ಥಿತಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಲಕ್ಷ್ಮೇಶ್ವರ ಸೇರಿದಂತೆ ಗದಗ ಜಿಲ್ಲೆಯ ಹಲವು ಟೊಮೆಟೋ ಬೆಳೆಗಾರರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ‘ಬೆಳೆ ಚೆನ್ನಾಗಿ ಬಂದರೆ ಬೆಲೆ ಇಲ್ಲ, ಬೆಲೆ ಇದ್ದರೆ ಬೆಳೆ ಇಲ್ಲ’ ಎಂಬಂತಾಗಿದೆ ರೈತರ ಸ್ಥಿತಿ.

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಹೆಲ್ಪ್‌ಲೈನ್: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ಟೊಮೆಟೋ ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ಪರಿಹಾರ ನೀಡಬೇಕು. ಮಾರುಕಟ್ಟೆ ಕುಸಿತದಿಂದ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.