ಸೋಮವಾರ, 26 ಅಕ್ಟೋಬರ್ 2026
Trending

Mumbai : ‘ಗೆಟ್ ಔಟ್ ಫ್ರಮ್ ಹಿಯರ್, ಟ್ರಾಫಿಕ್ ಜಾಮ್ ಮಾಡ್ಬೇಡಿ’- ಮೆರವಣಿಗೆ ವೇಳೆ ಬಿಜೆಪಿ ಸಚಿವನ ತಡೆದು ಮಹಿಳೆ ತರಾಟೆ – Video Viral

Mumbai: ಮಹಾರಾಷ್ಟ್ರದಲ್ಲಿ ಸಚಿವರೊಬ್ಬರ ರ್‍ಯಾಲಿಯಿಂದಾಗಿ ಉಂಟಾದ ಭಾರಿ ಟ್ರಾಫಿಕ್ ಜಾಮ್‌ನಿಂದ ಆಕ್ರೋಶಗೊಂಡ ಮಹಿಳೆಯೊಬ್ಬರು, ಕಾರಿನಿಂದ ಕೆಳಗಿಳಿದು ಬಂದು ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ  ಮುಂಬೈನ ವರ್ಲಿಯಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Sponsored

ಮುಂಬೈನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಿಂದಾಗಿ ರಸ್ತೆಯಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಇದೇ ವೇಳೆ ತನ್ನ ಮಗುವನ್ನು ಶಾಲೆಯಿಂದ ಕರೆತರಲು ಹೋಗುತ್ತಿದ್ದ ಮಹಿಳೆಯೊಬ್ಬರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಅವರು, ನೇರವಾಗಿ ಮೆರವಣಿಗೆಯ ಮಧ್ಯಕ್ಕೆ ನುಗ್ಗಿ ಸಚಿವ ಗಿರೀಶ್ ಮಹಾಜನ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದು ‘ಗೆಟೌಟ್ ಫ್ರಮ್ ಹಿಯರ್’ ಎಂದು ಅವಾಜ್ ಹಾಕಿದ್ದಾರೆ.

Advertisement

ಯಸ್, “ಇಲ್ಲಿಂದ ಹೊರಡಿ, ನೀವು ಟ್ರಾಫಿಕ್ ಜಾಮ್ ಮಾಡುತ್ತಿದ್ದೀರಿ. ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇ ಯಾಕೆ ರ್‍ಯಾಲಿ ಮಾಡುತ್ತಿದ್ದೀರಿ? ನಿಮಗೆ ಅರ್ಥವಾಗುತ್ತಿಲ್ಲವೇ? ನೂರಾರು ಜನ ಇಲ್ಲಿ ಕಾಯುತ್ತಿದ್ದಾರೆ,” ಎಂದು ಮಹಿಳೆ ಪೊಲೀಸರು ಮತ್ತು ಸಚಿವರ ಮೇಲೆ ಕಿರುಚಾಡಿದರು. ಪೊಲೀಸರು ಸಮಾಧಾನಪಡಿಸಲು ಯತ್ನಿಸಿದಾಗ, ಹಿರಿಯ ಅಧಿಕಾರಿಗಳನ್ನೇ ಕರೆಯುವಂತೆ ಪಟ್ಟು ಹಿಡಿದರು. ಈ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

ಇನ್ನೂ ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ ಆ ಮಹಿಳೆ ಪ್ರತಿಭಟನಾಕಾರರ ಮೇಲೆ ನೀರಿನ ಬಾಟಲಿ ಎಸೆದರು ಮತ್ತು ಕೆಟ್ಟ ಭಾಷೆ ಬಳಸಿದರು. ನಾಗರಿಕ ಭಾಷೆಯಲ್ಲಿ ಮಾತನಾಡಬಹುದಿತ್ತು. ಪ್ರತಿಭಟನೆಯಿಂದ ಟ್ರಾಫಿಕ್ ಆಗುವುದು ನಿಜ, ಆದರೆ ನಾವು ಮಹಿಳೆಯರ ಹಕ್ಕುಗಳಿಗಾಗಿ ಈ ಪ್ರತಿಭಟನೆ ನಡೆಸುತ್ತಿದ್ದೆವು. ಅವರ ಸಿಟ್ಟು ಅತಿಯಾಗಿತ್ತು. ಆದರೂ ಜನರಿಗೆ ಆದ ತೊಂದರೆಗೆ ನಾನು ಕ್ಷಮೆ ಯಾಚಿಸುತ್ತೇನೆ,” ಎಂದಿದ್ದಾರೆ.

ವಿಡಿಯೋ 👇

https://x.com/i/status/2046654897240855022