ಶನಿವಾರ, 24 ಅಕ್ಟೋಬರ್ 2026

Terrorist attack: ಕರಾವಳಿ ಪ್ರದೇಶದಲ್ಲಿ ಉಗ್ರ ಚಟುವಟಿಕೆ!

Terrorist attack: ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರುತ್ತಿದೆ. ಇದೀಗ ಕರಾವಳಿ ಭಾಗದಲ್ಲಿ ಮತ್ತೆ ಸ್ಯಾಟಲೈಟ್ (Satallite phone) ಫೋನ್‌ಗಳು ಆಕ್ಟಿವ್ ಆಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಇದರಿಂದ ಆ ಭಾಗದಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯವಾದ ಶಂಕೆ ಉಂಟಾಗಿದೆ. ಈಗಾಗಲೇ ಮುಂಬೈ ಭಯೋತ್ಪಾದಕರ ದಾಳಿಯ (Mumbai terrorist attack) ಬಳಿಕ ದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ನಿಷೇಧಿಸಲಾಗಿದೆ. ಆದ್ರೆ ಇದೀಗ ಮತ್ತೆ ಈ ಭಾಗದಲ್ಲಿ ಈ ಸ್ಯಾಟಲೈಟ್ ಪೋನ್‌ಗಳ ಬಳಕೆ ಶುರುವಾಗಿದೆ.

ಕಳೆದ 10 ದಿನಗಳಿಂದ ಕುಂದಾಪುರದ ದಟ್ಟ ಅರಣ್ಯ ಮಧ್ಯೆ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿರುವುದು ಪತ್ತೆಯಾಗಿದ್ದು, ಅಂಪಾರು ಮತ್ತು ಹೆಮ್ಮಾಡಿ ಕೊಲ್ಲೂರು ರಸ್ತೆಯ ಬಾಳೆಕೆರೆ ಬಳಿ ಲೊಕೇಶನ್ ತೋರಿಸಿದೆ.

ಕೂಡಲೇ ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಕರಾವಳಿ ಪೋಲಿಸರಿಗೆ ಮಾಹಿತಿ ನೀಡಿದ್ದು, ದೇಶದ ಆಂತರಿಕ ಭದ್ರತೆಯ ವಿಚಾರವಾಗಿದ್ದು ರಾಜ್ಯ ಗುಪ್ತಚರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ