ಸೋಮವಾರ, 26 ಅಕ್ಟೋಬರ್ 2026
Trending

ರಸ್ತೆ ಬದಿ ಮೂತ್ರ ಮಾಡುವಾಗ ಖಾಸಗಿ ಅಂಗ ಕಂಡರೆ ಲೈಂಗಿಕ ದೌರ್ಜನ್ಯ ಅಲ್ಲ – ಕರ್ನಾಟಕ ಹೈಕೋರ್ಟ್!!

Advertisement

ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ  ಆಕಸ್ಮಿಕವಾಗಿ ದೇಹದ ಖಾಸಗಿ ಅಂಗಗಳು ಮಹಿಳೆಗೆ ಕಾಣಿಸಿದರೆ, ಅದನ್ನು ‘ಲೈಂಗಿಕ ಕಿರುಕುಳ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

Sponsored

ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹಾಗೂ ಆರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಚಿಕ್ಕಮಗಳೂರು ಮೂಲದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಯುವಕನ ವಿರುದ್ಧದ ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಳಿಸಿ ಈ ಆದೇಶ ನೀಡಿದೆ.

Advertisement
Advertisement

ಏನಿದು ಪ್ರಕರಣ?

2026ರ ಜನವರಿ 24ರ ಮಧ್ಯಾಹ್ನ ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ಯುವತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಸ್‌ನಿಂದ ಇಳಿದಿದ್ದ ಅರ್ಜಿದಾರ ಯುವಕನಿಗೆ ತುರ್ತಾಗಿ ಮೂತ್ರ ವಿಸರ್ಜನೆ ಮಾಡುವ ಅಗತ್ಯವಿತ್ತು. ಹತ್ತಿರದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯ ಕಾಣದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಯುವತಿ ಅಲ್ಲಿಗೆ ಬಂದಿದ್ದಾರೆ. ಆಗ ಯುವಕ ದಿಢೀರನೆ ತಿರುಗಿದಾಗ ಆಕಸ್ಮಿಕವಾಗಿ ಆತನ ಗುಪ್ತಾಂಗ ಯುವತಿಗೆ ಕಾಣಿಸಿತ್ತು.

ಇದನ್ನು ಲೈಂಗಿಕ ಕಿರುಕುಳ ಎಂದು ಭಾವಿಸಿದ ಯುವತಿ ತಕ್ಷಣ ಕೂಗಿಕೊಂಡಾಗ, ಸ್ಥಳೀಯರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75(2) ರಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದರು.

Advertisement
div class="ere-sticky">