ಸೋಮವಾರ, 26 ಅಕ್ಟೋಬರ್ 2026
Trending

CJ Roy: ಉದ್ಯಮಿ ಸಿಜೆ ರಾಯ್ ಪ್ರಕರಣ ರೋಚಕ ಟ್ವಿಸ್ಟ್ – ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ತನಿಖೆಯಲ್ಲಿ ಬಯಲು

CJ Roy: ಬೆಂಗಳೂರಿ ಖ್ಯಾತ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ  ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ತನಿಖೆಯ ವೇಳೆ ಖ್ಯಾತ ನಟಿ ಒಬ್ಬರಿಂದ ಸಿಜೆ ರಾಯ್ ಹನಿ ಟ್ರ್ಯಾಪ್ ಗೆ ಒಳಗಾಗಿದ್ದರು ಎಂಬ ವಿಚಾರ ಬಯಲಾಗಿದೆ.

Sponsored

ಜನವರಿ 30ರಂದು ಸಿಜೆ ರಾಯ್ ಆತ್ಮಹತ್ಯೆಗೆ ಒಳಗಾಗಿದ್ದರು. ಇದು ದೇಶಾದ್ಯಂತ ಈ ಘಟನೆ ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಐಟಿ ದಾಳಿ ಹಾಗೂ ಮಾನಸಿಕ ಹಿಂಸೆ ಆರೋಪವೂ ಕೇಳಿಬಂದಿತ್ತು. ಇದೀಗ ಎಸ್‌ಐಟಿ ತಂಡ ತನಿಖೆಯಲ್ಲಿ ಕೆಲ ಸ್ಫೋಟಕ ಸಾಕ್ಷ್ಯಗಳನ್ನು ಕಲೆ ಹಾಕಿದ್ದು ಸಿಜೆ ರಾಯ್‌ನನ್ನು ಸಿನಿಮಾ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರುವುದು ಪತ್ತೆಯಾಗಿದೆ. ಇದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ

Advertisement
Advertisement

ಹನಿಟ್ರ್ಯಾಪ್ ಮಾಡಿದ ನಟಿ ಯಾರು?

ಸಿಜೆ ರಾಯ್ ಶ್ರೀಮಂತ ಉದ್ಯಮಿ ಮಾತ್ರವಲ್ಲ ಅತ್ಯಂತ ಜನಪ್ರಿಯವಾಗಿದ್ದರು. ಉದ್ಯಮದ ಹಲವು ಪ್ರಚಾರಗಳಲ್ಲಿ ನಟಿಯರು, ಮಾಡೆಲ್‌ಗಳನ್ನು ಬಳಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ಪ್ರಾಯೋಜಕತ್ವ ಸೇರಿದಂತೆ ಸೆಲೆಬ್ರೆಟಿಗಳ ಜೊತೆಗೂ ಉತ್ತಮ ನಂಟು ಹೊಂದಿದ್ದಾರೆ. ಇದರ ನಡುವೆ ಸಿನಿಮಾ ನಟಿಯೊಬ್ಬರು ಸೆಜೆ ರಾಯ್‌ ಅವರನ್ನು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಬೀಳಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ. ಸಿಜೆ ರಾಯ್‌ಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ. ಈ ಕುರಿತು ಎಸ್‌ಐಟಿ ತನಿಖಾ ತಂಡ ತನಿಖೆ ನಡೆಸುತ್ತಿದೆ. ಆದರೆ ಆ ನಟಿ ಯಾರು? ಏನು? ಎಂಬುದಾಗಿ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ

Advertisement