ECI: ಭಾರತೀಯ ಚುನಾವಣಾ ಆಯೋಗವು (ECI) ಅತಿ ದೊಡ್ಡ ಅಭಿಯಾನಕ್ಕೆ ಮುಂದಾಗಿದ್ದು 334 ನೋಂದಾಯಿತ, ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು (Political Party) ಪಟ್ಟಿಯಿಂದ ತೆಗೆದುಹಾಕಿದೆ.
Sponsoredಹೌದು, ಈ ಬಗ್ಗೆ ಭಾರತೀಯ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದ್ದು, 334 ರಾಜಕೀಯ ಪಕ್ಷಗಳು ನೋಂದಾಯಿತ ಮಾನ್ಯತೆಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಅಗತ್ಯವಾದ ಷರತ್ತುಗಳನ್ನು ಪೂರೈಸಲು ವಿಫಲವಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.
Marriage AdSponsoredಈ ಪಕ್ಷಗಳು ಕಳೆದ ಆರು ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಹಾಗೂ ಭೌತಿಕವಾಗಿ ಎಲ್ಲಿಯೂ ಕಚೇರಿಗಳನ್ನು ಹೊಂದಿಲ್ಲ. ಮಾನ್ಯತೆ ಪಡೆಯದ ಇಂತಹ ಇನ್ನೂ 2,520 ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ ಎಂದು ಆಯೋಗ ತಿಳಿಸಿದೆ.
ಅಲ್ಲದೆ ಸದ್ಯ 6 ರಾಷ್ಟ್ರೀಯ ಪಕ್ಷಗಳು ಮತ್ತು 67 ಪ್ರಾದೇಶಿಕ ಪಕ್ಷಗಳು ದೇಶದಲ್ಲಿವೆ.
PM Modi: ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ – ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿ!!




