ಸೋಮವಾರ, 26 ಅಕ್ಟೋಬರ್ 2026
Trending

ಕುಡಿದ ಮತ್ತಿನಲ್ಲಿ ಕಾರು ಚಾಲನೆ, 3 ಸಾವು:  ಅಪ್ಪ ನೋಡ್ಕೋತಾರೆ ಎಂದ ಆರೋಪಿ

ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನೆಡುಂಬಸ್ಸೆರಿಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ನಡೆದಿದ್ದು, 19 ವರ್ಷದ ಯುವಕ ಕುಡಿತ ಮತ್ತಿನಲ್ಲಿ ಮಿನಿ ಕೂಪರ್‌ ಕಾರು ಚಲಾಯಿಸುತ್ತಿದ್ದು, ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾ, ಐಟಿ ಉದ್ಯೋಗಿಗಳು ಸಾವಿಗೀಡಾಗಿದ್ದಾರೆ.

Sponsored

ಕಾರು ಸ್ಕೂಟರನ್ನು ಸುಮಾರು 100 ಮೀಟರ್‌ಗಳವರೆಗೆ ದೂರಕ್ಕೆ ಎಳೆದುಕೊಂಡು ಹೋಗಿದೆ. ದೇವಿಕಾ, ಗೋಪಿಕಾ, ಇಜಾಜ್‌ ಮೃತರು.

Advertisement
Advertisement

ಅಪಘಾತದ ನಂತರ ಆರೋಪಿ ಸುಹೇಲ್‌ ಸಜೀವ್‌ ಪಶ್ಚಾತ್ತಾಪವಿಲ್ಲದೆ, ಸ್ಥಳೀಯರ ಜೊತೆ ಮತ್ತು ಪೊಲೀಸರ ಬಳಿ ” ರಸ್ತೆ ಇರುವುದು ವಾಹನ ಚಾಲನೆ ಮಾಡಲು, ಇದರಲ್ಲಿ ತಪ್ಪೇನಿದೆ? ನನ್ನ ತಂದೆ ಎಲ್ಲ ವಿಷಯ ನೋಡಿಕೊಳ್ಳುತ್ತಾರೆ” ಎಂದು ಉದ್ಧಟತನದಿಂದ ಮಾತನಾಡಿದ್ದಾನೆ. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾರ್ವಜನಿಕರು ಆಕ್ರೋಶ ಹೆಚ್ಚಿದ್ದು, ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಸ್ಥಳೀಯ ಯುವಕರ ಗುಂಪು ಆರೋಪಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದೆ.

ಕೇರಳದಲ್ಲಿ ಮದ್ಯಪಾನ ಸೇವನಗೆ ಕನಿಷ್ಠ ವಯಸ್ಸು 23. ಆದರೆ 19 ವರ್ಷದ ಸುಹೇಲ್‌ ಹಲವು ಬಾರ್‌ಗಳಲ್ಲಿ ಮದ್ಯ ಸೇವನೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಮದ್ಯ ಪೂರೈಸಿದ ಬಾರ್‌ಗಳ ಹಾಗೂ ಪಬ್‌ಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೇರಳ ಅಬಕಾರಿ ಸಚಿವ ಎಂ ಲಿಜು ಅವರು ಅಬಕಾರಿ ಆಯುಕ್ತರಿಗೆ ಆದೇಶ ನೀಡಿದ್ದಾರೆ.

Advertisement