ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದು, ಇಂದಿಗೆ ಮೂರು ದಿನಗಳು ಸಂದಿವೆ. ಚೆನ್ನಮ್ಮ ಅವರ ದಿನಚರಿಯ ಕುರಿತು, ಅವರ ಆಸೆ ಆಕಾಂಕ್ಷೆಗಳ ಕುರಿತು ಕುಟುಂಬಸ್ಥರು ಮಾತನಾಡುತ್ತ ಭಾವುಕರಾಗುತ್ತಿದ್ದಾರೆ. ಈ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ತಾಯಿಯ ಬಗ್ಗೆ ಮಾತನಾಡುತ್ತಾ ಅವರ ಕೊನೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ಹಾಸನ (Hassan) ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಹಲವು ಭಾವನಾತ್ಮಕ ವಿಚಾರಗಳನ್ನ ಹಂಚಿಕೊಂಡರು. ಈ ವೇಳೆ ಚೆನ್ನಮ್ಮ ಅವರು ಕೊನೆಯ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನ ನೋಡಬೇಕೆಂಬ ಆಸೆ ಇಟ್ಟುಕೊಂಡಿದ್ರು, ಹೀಗಾಗಿ ಅವರು ನನ್ನ ಬಳಿ ಒಮ್ಮೆ ಪ್ರಜ್ವಲ್ ನನ್ನು ಯಾವಾಗ ಕರೆದುಕೊಂಡು ಬರುತ್ತೀಯಾ ಎಂದು ಕೇಳಿದ್ದರು. ಅದೊಂದು ನೋವು ನನ್ನ ಬಳಿ ಇದೆ ಅಂತ ಅವರು ಭಾವುಕರಾದರು.
ಚೆನ್ನಮ್ಮ ಅವರು ಬಹುಶಃ ಇನ್ನೂ 3-4 ವರ್ಷಗಳ ಕಾಲ ಬದುಕುತ್ತಿದ್ದರು, ಈ ದಿನ ನೋಡಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಪ್ರಜ್ವಲ್ ರೇವಣ್ಣ ಅವರ ಒಂದು ಘಟನೆಯಿಂದಾಗಿ ಅವರು ಬಹಳಷ್ಟು ನೊಂದಿದ್ದರು. ಈ ಹಿನ್ನೆಲೆಯಲ್ಲಿ ದಹಿಕ ಹಾಗೂ ಮಾನಸಿಕವಾಗಿ ಕೂಗಿದರು ಎಂಬುದನ್ನು ಅವರು ಪರೋಕ್ಷವಾಗಿ ಕುಟುಂಬದ ವಿಚಾರವೆಂದು ತಿಳಿಸಿದ್ದಾರೆ. ಆದರೆ, ಇದು ಆ ದೇವರು ತೀರ್ಮಾನ ಮಾಡಿರೋದು ನಾವಲ್ಲ. ದೇವರ ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣನನ್ನು ಯಾವಾಗ ಕರೆತ್ತಿರುತ್ತೀಯ ಎಂದು ಚೆನ್ನಮ್ಮ ಅವರು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿಯವರು ತಾವು ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡಿದರು ಎಂಬುದನ್ನು ತಿಳಿಸಿಲ್ಲ. ಆದರೆ ತಮ್ಮ ತಾಯಿಗೆ ಅದೊಂದು ಆಸೆ ಇತ್ತು ಎಂಬುದನ್ನು ಹೇಳಿದ್ದಾರೆ.



