ಸೋಮವಾರ, 26 ಅಕ್ಟೋಬರ್ 2026
Trending

Deepavali Scheme: ಮಹಿಳೆಯರಿಗೆ ಗುಡ್‌ನ್ಯೂಸ್‌; ದೀಪಾವಳಿ ಬೋನಸ್ ರೂ.3000 ಸಿಗಲಿದೆ, ಈ ಲಾಭ ಪಡೆಯುವುದು ಹೇಗೆ ಗೊತ್ತಾ?

Deepavali Scheme: ದೇಶದ ರಾಜ್ಯ ಸರ್ಕಾರಗಳು ಮಹಿಳೆಯರ ಹಿತಾಸಕ್ತಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ರೂಪಿಸುತ್ತಲೇ ಇರುತ್ತವೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ದೇಶದ ಹಲವು ರಾಜ್ಯಗಳಲ್ಲಿ ಯೋಜನೆಗಳನ್ನು ನಡೆಸಲಾಗುತ್ತಿದೆ.

Deepavali Scheme: ದೇಶದ ರಾಜ್ಯ ಸರ್ಕಾರಗಳು ಮಹಿಳೆಯರ ಹಿತಾಸಕ್ತಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ರೂಪಿಸುತ್ತಲೇ ಇರುತ್ತವೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ದೇಶದ ಹಲವು ರಾಜ್ಯಗಳಲ್ಲಿ ಯೋಜನೆಗಳನ್ನು ನಡೆಸಲಾಗುತ್ತಿದೆ. ಇದೀಗ ಮಹಾರಾಷ್ಟ್ರ ಸರ್ಕಾರವು ಮಜ್ಹಿ ಲಡ್ಕಿ ಬಹಿನ್ ಯೋಜನೆಯಡಿ ದೀಪಾವಳಿ ಬೋನಸ್ ನೀಡಲು ಹೊರಟಿದೆ. ಈ ಯೋಜನೆಗೆ ನೋಂದಾಯಿಸಿದ ಮತ್ತು ಹಿಂದಿನ ತಿಂಗಳುಗಳ ಮೊತ್ತವನ್ನು ಪಡೆದ ಮಹಿಳೆಯರಿಗೆ ಬೋನಸ್ ನೀಡಲಾಗುವುದು.

Sponsored

ಮಹಾರಾಷ್ಟ್ರದಲ್ಲಿ ಲಡ್ಕಿ ಬಹಿನ್ ಯೋಜನೆಯನ್ನು ರಾಜ್ಯದ ಮಹಿಳೆಯರಿಗಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ನೇರವಾಗಿ 1500 ರೂ.ಗಳನ್ನು ಅವರ ಖಾತೆಗೆ ನೀಡಲಾಗುತ್ತದೆ. ಆದರೆ ಇದೀಗ ಮಹಾರಾಷ್ಟ್ರ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನೇನು ದೀಪಾವಳಿ ಬರಲಿದ್ದು, ಮಹಿಳೆಯರಿಗೆ ಬೋನಸ್ ಸುರಿಮಳೆಯಾಗಲಿದೆ. ದೀಪಾವಳಿ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರ ಮಾಝಿ ಅಡಿಯಲ್ಲಿ ಅರ್ಹ ಮಹಿಳೆಯರ ಖಾತೆಗೆ ಎರಡು ತಿಂಗಳ ಹಣವನ್ನು ಜಮಾ ಮಾಡಲಿದೆ.

ಲಡ್ಕಿ ಬಹಿನ್ ಯೋಜನೆ; ಈ ಯೋಜನೆಗೆ ನೋಂದಾಯಿಸಿದ ಮತ್ತು ಹಿಂದಿನ ತಿಂಗಳುಗಳ ಮೊತ್ತವನ್ನು ಪಡೆದ ಮಹಿಳೆಯರಿಗೆ ದೀಪಾವಳಿ ಬೋನಸ್ ನೀಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ. ಇನ್ನೂ ಯೋಜನೆಗೆ ಅರ್ಜಿ ಸಲ್ಲಿಸದ ಮಹಿಳೆಯರಿಗೆ ಅಕ್ಟೋಬರ್ 15 ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಯೋಜನೆಯಡಿಯಲ್ಲಿ ಸರ್ಕಾರವು ಇದುವರೆಗೆ 94000 ಕ್ಕೂ ಹೆಚ್ಚು ಮಹಿಳೆಯರಿಗೆ ದೀಪಾವಳಿ ಬೋನಸ್ ಅನ್ನು ನೀಡಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು, ವಯಸ್ಸು 21 ರಿಂದ 65 ವರ್ಷಗಳ ನಡುವೆ ಇರಬೇಕು.