ಭಾನುವಾರ, 25 ಅಕ್ಟೋಬರ್ 2026
Trending

ಸ್ಥಳ, ಸಮಯ ನೀವೇ ನಿರ್ಧರಿಸಿ ಮಾತುಕತೆಗೆ ಬನ್ನಿ – CJP ಗೆ 4ನೇ ಬಾರಿ ಕೇಂದ್ರ ಆಹ್ವಾನ

ನೀವೇ ಸ್ಥಳ ಮತ್ತು ಸಮಯವನ್ನು ನಿಗದಿ ಮಾಡಿ ಚರ್ಚೆಗೆ ಬನ್ನಿ ಎಂದು ಪ್ರತಿಭಟನಾನಿರತ ‘ಕಾಕ್ರೋಚ್ ಜನತಾ ಪಾರ್ಟಿ’ ಸದಸ್ಯರಿಗೆ  ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಆಹ್ವಾನ ನೀಡಿದ್ದಾರೆ.

Sponsored

ನಿನ್ನೆ ಮಧ್ಯಾಹ್ನದಿಂದ ಸಿಜೆಪಿ (CJP) ಪ್ರತಿನಿಧಿಗಳೊಂದಿಗೆ ಚರ್ಚಿಸಲು ಸರ್ಕಾರವು ಈಗಾಗಲೇ ನಾಲ್ಕು ಅಧಿಕೃತ ಪ್ರಸ್ತಾಪಗಳನ್ನು ಕಳುಹಿಸಿದೆ. ಇದು ನಮ್ಮ ಯುವ ಸ್ನೇಹಿತರಿಗೆ ನೀಡುತ್ತಿರುವ ಮುಕ್ತ ಆಹ್ವಾನ. ನಿಮ್ಮ ಅನುಕೂಲಕ್ಕೆ ತಕ್ಕಂತೆ, ಯಾವುದೇ ಸಮಯದಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ನಾವು ಯಾವುದೇ ಪ್ರತಿಷ್ಠೆಯಾಗಿ ಸ್ವೀಕರಿಸಿಲ್ಲ. ಜೆ.ಪಿ. ನಡ್ಡಾ ಮತ್ತು ನಾನು ಖುದ್ದು ಚರ್ಚೆಗೆ ಉಪಸ್ಥಿತರಿರುತ್ತೇವೆ. ನಿರಂತರವಾಗಿ ಮಾತುಕತೆ ನಡೆಸುವ ಮೂಲಕವೇ ನಾವು ಹಂತ-ಹಂತವಾಗಿ ಪರಿಹಾರದತ್ತ ಸಾಗಬಹುದು. ಇದು ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಸರ್ಕಾರ ಕೈಗೊಳ್ಳುತ್ತಿರುವ ಸಾಲು ಸಾಲು ಕ್ರಮಗಳ ಭಾಗವಾಗಿದೆ ಎಂದಿದ್ದಾರೆ.