ಶನಿವಾರ, 24 ಅಕ್ಟೋಬರ್ 2026

ದಾವಣಗೆರೆ: ʼಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರʼ-ಕಾರ್ಣಿಕ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಗರುಡ ಪಂಚಮಿಯಂದು ಸಂಭ್ರಮದ ಕಾರ್ಣಿಕೋತ್ಸವ ನಡೆದಿದ್ದು, ಕುಂಬಳೂರಿನ ಗಣಮಗ ದುಂಡ್ಯಪ್ಪ ʼಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರʼ ಎನ್ನುವ ಭವಿಷ್ಯವಾಣಿಯನ್ನು ಪೂಜಾರಿ ನುಡಿದರು.

ಇದರ ಅರ್ಥ ಅಶ್ವಿನಿ ಮಳೆ ಮಾಯವಾಗಿ ಮಳೆ ಕೊರತೆ ಆಗಿದ್ದು ಆಹಾರಧಾನ್ಯಗಳು ಗಗನಕ್ಕೇರುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ ಎನ್ನುವುದು ಭಕ್ತರ ವಿಶ್ಲೇಷಣೆ.