ಶನಿವಾರ, 24 ಅಕ್ಟೋಬರ್ 2026

ಸಿಲಿಂಡರ್ ಬೆಲೆಯಲ್ಲಿ 200 ರೂ ಇಳಿಕೆ!!

 

ಬಹುದಿನಗಳ ಬಳಿಕ LPG ಸಿಲಿಂಡರ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 200 ರೂ.ಗಳಷ್ಟು ಇಳಿಕೆಯಾಗಿದೆ.

ಹೌದು, ಹಣದುಬ್ಬರದಿಂದ ಕಂಗಾಲಾದ ಜನರಿಗೆ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ ದರ ಕುಸಿತದ ಸುದ್ದಿ ನೆಮ್ಮದಿ ಕೊಟ್ಟಿದೆ. ಆಗಸ್ಟ್ 1 ರಂದು, 19 ಕೆಜಿ ವಾಣಿಜ್ಯ LPG ಸಿಲಿಂಡರ್‌ ಬೆಲೆ ಬರೋಬ್ಬರಿ ₹200ಕ್ಕಿಂತ ಕಡಿಮೆಯಾಗಿದೆ. ಈ ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ

ಕೋಲ್ಕತ್ತಾದಲ್ಲಿ (Kolkata) ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 209 ರೂ. ಇಳಿಕೆಯಾಗಿದ್ದು ಪ್ರತಿ ಸಿಲಿಂಡರ್‌ ಬೆಲೆ 2,872.50 ರೂ.ಗೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ ಮೇಲಿನ ಬೆಲೆ 202 ರೂ. ಇಳಿಕೆಯಾಗಿದ್ದು, 2,728 ರೂ.ಗೆ ಇಳಿದಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ (ರೀಟೇಲ್‌ ದರ) 2,930ರೂ. ರಷ್ಟಿದೆ.

ಒಟ್ಟಿನಲ್ಲಿ ಬೆಲೆ ಇಳಿಕೆಯು ಇದು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಫಾಸ್ಟ್‌ಫುಡ್‌ ಹಾಗೂ ಕ್ಯಾಟರಿಂಗ್‌ ಮಾಲೀಕರಿಗೆ ಗುಡ್‌ನ್ಯೂಸ್‌ ಕೊಟ್ಟಂತಾಗಿದೆ