ಶನಿವಾರ, 24 ಅಕ್ಟೋಬರ್ 2026

ಯುಟ್ಯೂಬರ್ ಅಖಿಲ್ ಸಂಸಾರದಲ್ಲಿ ಬಿರುಕು- ಲಕ್ಷಾಧಿಪತಿ ಗಂಡನ ಬಿಟ್ಟು ಹೆಂಡತಿ ಬಸ್ ಕಡಂಕ್ಟರ್ ಜೊತೆ ಓಡಿ ಹೋಗಲು ಕಾರಣ ಬಹಿರಂಗ!!

ಮಲಯಾಳಂನ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್ ಆರ್ ಡಿ ಮತ್ತು ಅವರ ಪತ್ನಿ ಮೇಘಾ ನಡುವಿನ ವೈವಾಹಿಕ ಜೀವನದಲ್ಲಿ ಬಿರುರುಗಾಳಿ ಎದ್ದಿದ್ದು ಮೇಘಾ ಮನೆಯಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದೀಗ ಮೇಘನಾ ಹೀಗೆ ಮಾಡಲು ಕಾರಣವೇನು ಎಂಬುದು ಬಯಲಾಗಿದೆ.

ಸೋಶಿಯಲ್ ಮೀಡಿಯಾ ಮೂಲಕವೇ ಪರಿಚಯವಾದ ಮೇಘಾ ಅವರನ್ನು ಪ್ರೀತಿಸಿ 2024 ರಲ್ಲಿ ವಿವಾಹವಾಗಿದ್ದರು. ಇಬ್ಬರೂ ಒಟ್ಟಿಗೆ ವೀಡಿಯೊಗಳು ಮತ್ತು ರೀಲ್ಸ್‌ಗಳನ್ನು ಮಾಡುತ್ತಾ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಆದರೆ ವಿವಾಹವಾದ ಕೆಲವೇ ತಿಂಗಳುಗಳಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದವು. 

ಪತಿ ಅಖಿಲ್ ಮೇಲೆ ಮೇಘಾಗೆ ಅಕ್ರಮ ಸಂಬಂಧದ ಅನುಮಾನ ಹುಟ್ಟಿಕೊಂಡಿದ್ದರಿಂದ ದಂಪತಿಯ ನಡುವೆ ಆಗಾಗ್ಗೆ ತೀವ್ರ ಜಗಳ ನಡೆಯುತ್ತಿತ್ತು. ಈ ಮಧ್ಯೆ, ಕಾನೂನು ಪದವೀಧರೆಯಾಗಿದ್ದ ಮೇಘಾ ಕಾಲೇಜಿಗೆ ಪ್ರಯಾಣಿಸುವಾಗ ಪ್ರತಿದಿನ ಭೇಟಿಯಾಗುತ್ತಿದ್ದ ಬಸ್ ಕಂಡಕ್ಟರ್ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಇತ್ತೀಚೆಗೆ ಆ ಕಂಡಕ್ಟರ್‌ಗೆ ಸರ್ಕಾರಿ ಕೆಲಸ ದೊರೆತ ನಂತರ, ಮೇಘಾ ತಮ್ಮ ಪತಿಯ ವಿರುದ್ಧ ಕಿರುಕುಳದ ಆರೋಪ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡು ನಂತರ ಅದನ್ನು ಡಿಲೀಟ್ ಮಾಡಿದ್ದರು.

ಇದರ ಬೆನ್ನಲ್ಲೇ ಮೇಘಾ ತಮ್ಮ ಪತಿ, ಚಿನ್ನಾಭರಣ ಹಾಗೂ ಹಣದೊಂದಿಗೆ ಕಾರಿನಲ್ಲಿ ಕಂಡಕ್ಟರ್ ಜೊತೆ ರಾತ್ರೋರಾತ್ರಿ ತೆರಳಿದ್ದಾರೆ ಎಂದು ಅಖಿಲ್ ಗಂಭೀರ ಆರೋಪ ಮಾಡಿದ್ದಾರೆ. ತಿಂಗಳಿಗೆ ಸುಮಾರು 10 ಲಕ್ಷ ರೂಪಾಯಿ ಸಂಪಾದಿಸುವ ಪತಿಯನ್ನು ತೊರೆದು ಕಂಡಕ್ಟರ್ ಜೊತೆ ತೆರಳಿದ ನಿರ್ಧಾರದ ಬಗ್ಗೆ ನೆಟ್ಟಿಗರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಖಿಲ್ ಈಗಾಗಲೇ ಕೇರಳ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದು, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.